ಅರ್ಥಶೋಧ; ಅರವಿಂದ ಚೊಕ್ಕಾಡಿ ಅವರ ವೈಚಾರಿಕ ವಿಮರ್ಶಾ ಕೃತಿ. ಮುನ್ನುಡಿಯನ್ನು ಬರೆಯುತ್ತಾ ಸುಬ್ರಾಯ ಚೊಕ್ಕಾಡಿ ಅವರು,"ಕೊಂಚ ಎಡಪಂಥೀಯ ಧೋರಣೆಯ ಈ ಕೃತಿಯು ಚರ್ಚಾ ಗೋಷ್ಠಿಯಲ್ಲಿರುವಂಥ ಅಂದರೆ ಎದುರಾಳಿಯ ವಾದಗಳನ್ನು ಕೊಚ್ಚಿ ಹಾಕುವ ರೀತಿಯ ಅದಮ್ಯ ಉತ್ಸಾಹ ಇದೆ. ತರ್ಕಪ್ರಧಾನ ಮಾತಿನ ಓಘವಿದೆ. ವ್ಯವಸ್ಥೆಯನ್ನು ಪ್ರಶ್ನಿಸುವ ಧೈರ್ಯ ಇದೆ.ಆದ್ದರಿಂದ ಪ್ರಬಂಧಗಳು ಕುತೂಹಲದಿಂದ ಕೆಲವೊಮ್ಮೆ ಉಸಿರುಗಟ್ಟಿಸುವಂತಹ ಉದ್ವೇಗದಿಂದ ಓದಿಸಿಕೊಂಡು ಹೋಗುತ್ತವೆ...."ಎಂದು ಹೇಳಿದ್ದಾರೆ.
ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ ಬಿ. ಇಡ್. ಪದವೀಧರರಾಗಿರುವ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...
READ MORE