ಕನ್ನಡದ ಪ್ರಮುಖ ಸಂಸ್ಕೃತಿ ಚಿಂತಕ-ವಿಮರ್ಶಕ ಡಿ.ಆರ್. ನಾಗರಾಜ್ ಅವರ ವಿಮರ್ಶಾ ಬರಹಗಳ ಸಂಕಲನ ಇದು. ಈ ಸಂಕಲನದಲ್ಲಿ ಡಿ.ಆರ್. ಅವರ ಆಲೋಚನಾ ಕ್ರಮ, ಚಿಂತನೆ ತೀಕ್ಷ್ಣತೆಗಳು ನೋಡಲು ಸಿಗುತ್ತವೆ. ಸಾಹಿತ್ಯ ಮತ್ತು ತತ್ವಜ್ಞಾನದ ನಡುವೆ ಸತ್ಯದ ವಾರಸುದಾರಿಕೆಗೆ ಸಂಬಂಧಿಸಿದಂತೆ ನಡೆಸಿದ ಚರ್ಚೆಯು ಸೊಗಸಾಗಿದೆ. ಡಿ.ಆರ್. ಅವರ ಆರಂಭದ ಮಾರ್ಕ್ಸ್ವಾದಿ ಆಲೋಚನಾ ಕ್ರಮದ ಸ್ಪಷ್ಟ ಗ್ರಹಿಕೆ ಈ ಪುಸ್ತಕದಲ್ಲಿ ನೋಡಬಹುದು. ಮುನ್ನುಡಿಯಲ್ಲಿ ಚಿಂತಕ ಮನು ಚಕ್ರವರ್ತಿ ಅವರು ’ಡಿ. ಆರ್. ಅವರ ಚಿಂತನೆಗಳು ಬೆಳೆದು ಬಂದ ರಿತಿಯು ಒಂದರ್ಥದಲ್ಲಿ ನಮ್ಮ ಸಂಸ್ಕೃತಿಯ, ಅಂದರೆ ಯಾವುದನ್ನು ನಾವು ತೃತೀಯ ಜಗತ್ತಿನ ಸಂಸ್ಕೃತಿಗಳೆಂದು ವಿಶಾಲಾರ್ಥದಲ್ಲಿ ಗುರುತಿಸುತ್ತೇವೋ ಅಂಥ ಸಂಸ್ಕೃತಿಯ, ಆತಂಕ-ತಲ್ಲಣ-ಬಯಕೆ-ವಿಷಾದಗಳೆಲ್ಲದರ ಜತೆಗೆ ನಡೆಸಿದ ಮುಖಾಮುಖಿಯೂ ಹೌದು. ಇಂಥ ಪ್ರತಿ ಹಂತದಲ್ಲೂ ಡಿ. ಆರ್. ರ ಪಠ್ಯಗಳು ಅಯಾ ಕಾಲದ ಮುಖ್ಯ ಲಕ್ಷಣಗಳ ಜತೆಗೆ ಒಪಿಗೆಯ ರೂಪದಲ್ಲಿ ಯಾ ವಿರೋಧದ ನೆಲೆಯಲ್ಲಿ ಸಂವಾದ ನಡೆಸಿವೆ; ಸಾಂಸ್ಕೃತಿಕ-ರಾಜಕೀಯ ಚರ್ಚೆಗಳನ್ನು ಆರಂಭಿಸಿವೆ. ಇಂಥ ಮುಖಾಮುಖಿ-ಚರ್ಚೆಗಳ ಮೂಲಕವೇ ಡಿ. ಆರ್. ಕನ್ನಡದ ಸಾಂಸ್ಕೃತಿಕ ಬದುಕಿಗೆ ನಿರಂತರವಾಗಿ ಸಂಘರ್ಷವನ್ನು ಕೊಟ್ಟರು ಎನ್ನುವುದು ನನ್ನ ನಂಬಿಕೆ’ ಎಂದು ಬರೆದಿದ್ದಾರೆ.
ಕನ್ನಡದ ಖ್ಯಾತ ವಿಮರ್ಶಕ ಹಾಗೂ ಚಿಂತಕರಾದ ಡಾ.ಡಿ.ಆರ್.ನಾಗರಾಜು ಅವರು ಹುಟ್ಟಿದ್ದು ದೊಡ್ಡಬಳ್ಳಾಪುರದಲ್ಲಿ. ತಂದೆ ರಾಮಯ್ಯ, ತಾಯಿ ಅಕ್ಕಯ್ಯಮ್ಮ. ದೊಡ್ಡಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಾಗರಾಜ್ ಪ್ರೌಢ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಅಂದಿನ ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ವಿದ್ಯಾರ್ಥಿಯಾದ ಅವರು ಆನರ್ಸ್ ಪದವಿಯನ್ನು ಅಲ್ಲಿಯೇ ಪಡೆದರು. ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ ಪಡೆದ ಡಿ.ಆರ್ ಸ್ವಲ್ಪ ಕಾಲ ಸಂಶೋಧಕ ವೃತ್ತಿಯಲ್ಲಿದ್ದು ಅಲ್ಲಿಯೇ ಕನ್ನಡ ಅಧ್ಯಾಪಕರಾದರು. ಪ್ರವಾಚಕರಾದರು, ಜೊತೆಗೆ ಕೈಲಾಸಂ ಪೀಠದ ಸಂದರ್ಶಕ ಪ್ರಾಧ್ಯಾಪಕರೂ ಆದರು. ಕನ್ನಡದ ವಿಮರ್ಶೆಗೆ ಸಾಂಸ್ಕೃತಿಕ ಆಯಾಮವನ್ನು ಒದಗಿಸಿದ ನಾಗರಾಜ್ ಅಮೆರಿಕದ ...
READ MORE