ತೆರೆ ಮರೆಯ ಚಿತ್ರಗಳು -ಸಾಹಿತಿ ಎಂ.ವಿ. ಸೀತಾರಾಮಯ್ಯನವರು ಬರೆದ ಏಕಾಂಕ ನಾಟಕ. ವೇಶ್ಯೆಯ ಮಗಳು ಸುಶೀಲೆಯನ್ನು ರಮೇಶ ಎಂಬ ಕಥಾನಾಯಕ ಪ್ರೇಮಿಸುತ್ತಾನೆ. ತಾಯಿ ವೇಶ್ಯೆಯಾಗಿರುವುದಕ್ಕೂ ಆಕೆಯ ಪುತ್ರಿ ಒಬ್ಬ ಯುವಕನನ್ನು ಪ್ರೇಮಿಸುವುದಕ್ಕೂ ಏನು ಸಂಬಂಧ? ರಮೇಶ ಸಹ ಇಂತಹ ಆರೋಪಗಳಿಗೆ ಕಿವಿಗೊಡಲಾರ. ಇದು ಏಕಾಂಕ ನಾಟಕದ ವಸ್ತು.
ಮೃಚ್ಛಕಟಿಕ ನಾಟಕದಲ್ಲಿ ಚಾರುದತ್ತನು ವೇಶ್ಯೆಯಾದ ವಸಂತಸೇನೆಯನ್ನು ಮನೆಗೆ ಕರೆ ತರುತ್ತಾನೆ. ಅಂದು ಸಮಾಜ ಇಂತಹ ವಿದ್ಯಮಾನವನ್ನು ಒಪ್ಪಿಕೊಂಡಿತ್ತು. ಇಂದು ಸಮಾಜದ ವಿರೋಧವಿದೆ. ರಮೇಶ ಹಾಗೂ ಸುಶೀಲೆಯು ಚಾರುದತ್ತ-ವಸಂತಸೇನೆಗೆ ಸಮ ಎನ್ನುವುದು ಇದರರ್ಥವಲ್ಲ. ಆ ಪ್ರಸಂಗವನ್ನೇ ಹೋಲುವ ವಸ್ತುವನ್ನು ಈ ಏಕಾಂಕ ನಾಟಕ ಹೊಂದಿದೆ ಎನ್ನುವುದು -‘ತೆರೆಮರೆಯ ಚಿತ್ರಗಳು’ ನಾಟಕದಲ್ಲಿ ಮೂಡಿಬಂದಿದೆ.
©2024 Book Brahma Private Limited.