ಮರಣ ಮೃದುಂಗ

Author : ರಾಜೇಂದ್ರ ಕಾರಂತ

Pages 64

₹ 60.00




Year of Publication: 2017
Published by: ಅಂಕಿತ ಪುಸ್ತಕ
Address: ಪ್ರಕಾಶಕರು : ಅಂಕಿತ ಪುಸ್ತಕ, #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

'ಮರಣ ಮೃದುಂಗ' ಕೃತಿಯು ರಾಜೇಂದ್ರ ಕಾರಂತ ಅವರ ನಾಟಕ. ಕನ್ನಡ ರಂಗಭೂಮಿಗೆ ವಿಶೇಷ ಗುಣವನ್ನು, ಅರ್ಥವನ್ನು ಕೊಟ್ಟವರು ರಾಜೇಂದ್ರ ಕಾರಂತ. ಸಮಾಜದ ಬಗೆಗಿನ ಅವರ ನಿಜ ಕಾಳಜಿ, ಸುಳ್ಳು, ಪೊಳ್ಳುಗಳಿಂದ ದೂರವಿರುವ ಸ್ವಭಾವ. ಬದುಕಿನ ಸುಂದರವಾದ ಕ್ಷಣಗಳನ್ನು, ಸಂಬಂಧಗಳನ್ನು ಬಿಡಿಸಿ ಹೇಳಬೇಕೆಂಬ ತುಡಿತ ಅವರ ಬರವಣಿಗೆಯಲ್ಲಿ ಎದ್ದುಕಾಣುತ್ತದೆ. ಚುರುಕು ಸಂಭಾಷಣೆ, ಆಳವಾದ ಅರ್ಥ, ತಿಳಿಹಾಸ್ಯ, ತುಂಟತನ ಇವೆಲ್ಲ ಅವರ ಬರವಣಿಗೆಯ ವೈಶಿಷ್ಟ್ಯವಾಗಿದೆ.

About the Author

ರಾಜೇಂದ್ರ ಕಾರಂತ

ರಂಗಭೂಮಿಯ ನಟ, ನಿರ್ದೇಶಕ, ನಾಟಕಕಾರ ರಾಜೇಂದ್ರ ಕಾರಂತ್, 40ಕ್ಕೂ ಹೆಚ್ಚು ಕನ್ನಡ ನಾಟಕಗಳನ್ನು  ರಚಿಸಿದ್ದಾರೆ. 1500ಕ್ಕೂ ಹೆಚ್ಚು ರಂಗ ಪ್ರಯೋಗಗಳ ರೂವಾರಿ, ನಾಟಕ ಸ್ಪರ್ಧೆಗಳಲ್ಲಿ ಅಸಂಖ್ಯಾತ ಬಹುಮಾನಗಳನ್ನು ಗಳಿಸಿದ್ದಾರೆ. ಹುಟ್ಟಿದ್ದು ಕುಂದಾಪುರದ ಕೋಣಿ ಗ್ರಾಮದಲ್ಲಿ. ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ.  ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ನಂತರ ಅವರು ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ವೃತ್ತಿ ಜೀವನ ಆರಂಭಿಸಿದರು. ಇವರ ಮೂರು ನಾಟಕಗಳು 100ಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ. ರೇಡಿಯೋ, ಟಿವಿ, ಚಲನಚಿತ್ರ ಮಾಧ್ಯಮಗಳಲ್ಲೂ ಸಾಕಷ್ಟು ಹೆಸರು ಮಾಡಿರುವ ಕಾರಂತರಿಗೆ 2008ರ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕೆ.ಎಸ್.ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆಯನ್ನು ...

READ MORE

Related Books