‘ನವನೀತ ರಾಮಾಯಣ’ ಹಿರಿಯ ಲೇಖಕ ಮುಳಿಯ ತಿಮ್ಮಪ್ಪಯ್ಯನವರು ರಚಿಸಿರುವ ಪೌರಾಣಿಕ ನಾಟಕ. ವಾಲ್ಮೀಕಿ ರಾಮಾಯಣವನ್ನಾಗಲಿ, ಇನ್ನಾವ ರಾಮಾಯಣವನ್ನಾಗಲಿ ಹಿಂಬಾಲಿಸಿ ಬರೆದುದಲ್ಲ ಈ ಕೃತಿ. ಕಥಾರಚನೆ ಆದ್ಯಂತವಾಗಿ ನವ-ನೀತವಾದುದೇ ಎನ್ನುತ್ತಾರೆ ಲೇಖಕ ಮುಳಿಯ ತಿಮ್ಮಪ್ಪಯ್ಯ. ಆ ಅರ್ಥಾನುಗುಣವಾಗಿಯೇ ಈ ಕಾವ್ಯದ ಹೆಸರನ್ನೂ ರೂಪಿಸಲಾಗಿದೆ. ಹೆಸರಿನಲ್ಲಿ ಹೊಳೆಯುವ ಶ್ಲೇಷಾರ್ಥದ ಸವಿ ಇದರೊಳಗಿದೆಯೋ, ಇಲ್ಲವೋ ಎಂಬುದನ್ನು ನಿರ್ಧರಿಸುವ ಅಧಿಕಾರವೆಂಬುದು ನನ್ನದಲ್ಲ- ಓದುಗರದ್ದು ಎನ್ನುತ್ತಾರೆ ಕರ್ತೃ.
ಈ ಪ್ರಥಮ ಕಾಂಡದಲ್ಲಿ ಸೀತಾಲಕ್ಷ್ಮಣ ಸಮೇತನಾದ ಶ್ರೀರಾಮನು ವನವಾಸ ಅನುಭವಿಸುವವರೆಗಿನ ಕಥಾಭಾಗವು ಅಡಕವಾಗಿದೆ.
©2024 Book Brahma Private Limited.