ಬಂಡಾಯದ ಸಂತ ಕಡಕೋಳ ಮಡಿವಾಳಪ್ಪ ಹಾಗೂ ಅನುಭಾವದ ಕಿಡಿ ಖೈನೂರು ಕೃಷ್ಣಪ್ಪ -ಎಂಬ ಎರಡು ಪ್ರತ್ಯೇಕ ನಾಟಕಗಳನ್ನು ಲೇಖಕಿ ಡಾ. ಮೀನಾಕ್ಷಿ ಬಾಳಿ ಅವರು ಸಂಕಲಿಸಿದ ಕೃತಿ-ಎರಡು ನಾಟಕಗಳು’. ಸಂತರಾದ ಕಡಕೋಳ ಮಡಿವಾಳಪ್ಪ ಮತ್ತು ಖೈನೂರ ಕೃಷ್ಣಪ್ಪ ಅವರ ಕುರಿತು ಈವರೆಗೂ ಕುರಿತು ಹೆಚ್ಚು ಸಂಶೋಧನೆ ನಡೆದಿಲ್ಲ.ಅದರ ಒಂದು ಭಾಗವಾಗಿ ಈ ಕೃತಿಯು ಹೆಚ್ಚು ಹೊಳವುಗಳನ್ನು ನೀಡುತ್ತದೆ. ಈ ಇಬ್ಬರ ಘನ ವ್ಯಕ್ತಿತ್ವದ ಬಹುಮುಖೀಯ ಆಯಾಮಗಳನ್ನು ಪರಿಚಯಿಸುತ್ತದೆ. ತುಂಬಾ ಸರಳ ಭಾಷೆಯಲ್ಲಿ ಪ್ರೇಕ್ಷಕರನ್ನು ಒಳಗೊಳ್ಳುವ ನಾಟಕ ದೃಶ್ಯಗಳು, ಸನ್ನಿವೇಶಗಳ ಜೋಡಣೆಯು ಕಥೆಯ ವೇಗಕ್ಕೆ ಕಲಾತ್ಮಕತೆಯ ಸ್ಪರ್ಶ ನೀಡಿದೆ.
ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ ಅವರು ಕನ್ನಡದ ಪ್ರಮುಖ ಲೇಖಕಿ. ಸದಾ ಚಿಂತನೆಯತ್ತ ತಮ್ಮ ನಡೆ-ನುಡಿಯನ್ನು ಕೊಂಡೊಯ್ಯುವ ಮೀನಾಕ್ಷಿ 1962 ಜೂನ್ 22 ಗುಲ್ಬರ್ಗಾದಲ್ಲಿ ಜನಿಸಿದರು. ’ಮಡಿವಾಳಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ಅನುಭಾವಿ ಕವಿ ಕಡಕೋಳ ಮಡಿವಾಳಪ್ಪನವರು ಮತ್ತು ಅವರ ಶಿಷ್ಯರು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ಧಾರೆ. ’ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ. ...
READ MORE