ವೈರಾಗ್ಯ, ವಿಜಯ ಮತ್ತಿತರೆ ನಾಟಕಗಳು-ಕೃತಿಯನ್ನು ಡಾ. ಬಸವರಾಜ ನಾಯ್ಕರ್ ಬರೆದಿದ್ದು, ಅನುಕ್ರಮವಾಗಿ ಅಕ್ಕಮಹಾದೇವಿ, ಕನಕದಾಸ ಹಾಗೂ ಶಿಶುವಿನಹಾಳ ಶರೀಫ್ ಅವರ ಜೀವನ ಚರಿತ್ರೆ ಕುರಿತಾಗಿದೆ. ದೇಹಧಾರಿ ಮನುಷ್ಯನನ್ನು ತನ್ನ ಪತಿ ಎಂದು ಸ್ವೀಕರಿಸದೇ ಅಕ್ಕ ಮಹಾದೇವಿಯು ಜನನ-ಮರಣಾದಚೆಯ ಚೆನ್ನ ಮಲ್ಲಿಕಾರ್ಜುನನ್ನೇ ತನ್ನ ಪತಿ ಎಂದು ಅಧ್ಯಾತ್ಮಕ ಹಾಘೂ ವೈರಾಗ್ಯದ ಜೀವನ ಸಾಗಿಸುತ್ತಾಳೆ. ಕಾಗಿನೆಲೆಯ ಪರಮ ಸಂತ ಕನಕದಾಸ ಭೌತಿಕ ಸಂಪತ್ತಿನ ಕ್ಷಣಿಕತೆಯನ್ನು ತಿರಸ್ಕರಿಸಿ, ಮುಕ್ತಿಯ ಚೈತನ್ಯದಾಯಕ ಜೀವನದತ್ತ ವಾಲಿ, ಜಾತಿವ್ಯವಸ್ಥೆ ವಿರುದ್ಧ ಹೋರಾಡಿದ ಬದುಕನ್ನು ಚಿತ್ರಿಸುತ್ತದೆ. ಕೊನೆಯದಾಗಿ, ಶಿಶುವಿನಹಾಳ ಶರೀಫ್ ಕೋಮುಸೌಹಾರ್ದತೆಯ ಪ್ರತೀಕವಾಗಿ ತತ್ವಜ್ಞಾನಿಯಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಚಿತ್ರಣವಿದೆ. ಅತಿಯಾದ ಭೋಗ, ಮತೀಯ ಸಂಘರ್ಷ ಹಾಗೂ ಆಧುನಿಕ ಜೀವನ ಶೈಲಿಯಿಂದ ಅಶಾಂತಿಯ ಇಂದಿನ ಜೀವನದಲ್ಲಿ ಜೀವನ ಸಾಮರಸ್ಯ, ಸಮನ್ವಯತೆಯನ್ನು ಬೋಧಿಸುವ ಇಲ್ಲಿಯ ನಾಟಕಗಳ ಸಂದೇಶಗಳು ಅರ್ಥಪೂರ್ಣ ಎನಿಸುತ್ತವೆ.
©2024 Book Brahma Private Limited.