ಮಡದಿ ಮಾಡಿದ ಮೋಸ ಅರ್ಥಾತ್ ಚಂಚಲೆಯ ಚೆಲ್ಲಾಟ ಸಾವಿತ್ರಿಯ ಸಂಕಟ-ಈ ನಾಟಕ ಕೃತಿ ರಚನೆಕಾರರು-ಮಲ್ಲಿನಾಥ ಆಲೇಗಾಂವ್ ಮಾಶಾಳ. ಪರಸ್ತ್ರೀ ವ್ಯಾಮೋಹಕ್ಕೊಳಗಾದ ಪತಿಯ ವರ್ತನೆಯನ್ನು ಕಂಡ ಪತ್ನಿಯ ಮನಸ್ಸಿನಲ್ಲಾಗುವ ತಳಮಳವನ್ನು ಈ ನಾಟಕದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಪರಸ್ತ್ರೀ ಸಂಗ, ಅಭಿಮಾನ ಸಂಗ ಎಂಬುದು ಈ ನಾಟಕದ ಸಂದೇಶ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳು ಗಮನ ಸೆಳೆಯುತ್ತವೆ.
ಕವಿ: ಮಲ್ಲಿನಾಥ್ ಆಲೇಗಾಂವ್ ಅವರು ಮೂಲತಃ ಕಲಬುರಗಿ ಜಿಲ್ಲೆ ಆಫಜಲಪುರ ತಾಲೂಕಿನ ಮಾಶಾಳ ಗ್ರಾಮದವರು. ತಂದೆ ಗುರಣ್ಣ ಆಲೇಗಾಂವ. ತಾಯಿ ಲಕ್ಷ್ಮೀಬಾಯಿ. ಸ್ವಗ್ರಾಮದಲ್ಲಿ ಏಳನೇ ತರಗತಿಯವರಿಗೆ ಅಭ್ಯಾಸ ಮಾಡಿದವರು. ಸೊಲ್ಲಾಪುರದ ಸಿದ್ದರಾಮೇಶ್ವರ ನಾಟ್ಯಸಂಘದ ಸ್ಥಾಪಕರು. ಸೊಲ್ಲಾಪುರದ ಸುಯೋಧನ ಕನ್ನಡ ಸಂಘದ ಕಾರ್ಯದರ್ಶಿ, ಮಾಶಾಳದ ಚೌಡೇಶ್ವರಿ ನಾಟ್ಯಸಂಘದ ಸಂಸ್ಥಾಪಕರು. ಮಾಶಾಳದ ಸರ್ಕಾರಿ ಪ್ರಾಥಮಿಕ ಶಾಲಾ ನಿರ್ದೇಶಕರು, ಕರ್ಜಿಗಿ ವಲಯದ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಅಧ್ಯಕ್ಷರು, ಕಲಬುರಗಿ ಜಿಲ್ಲೆ ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಗ್ರಾಮ ಸೇನಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕರ್ಜಿಗಿ ವಲಯದ ಸಾಹಿತ್ಯ ಸಮ್ಮೇಳನದ ಗೌರವ ...
READ MORE