ಉದಯರವಿ ಪ್ರಕಾಶನದಿಂದ 1963ರಲ್ಲಿ ಮೊದಲ ಬಾರಿಗೆ ಮುದ್ರಣ ಕಂಡಂತಹ ನಾಟಕ ಚಂದ್ರಹಾಸ. ರಂಗಭೂಮಿ ಎಂಬ ಮಾಸಪತ್ರಿಕೆಯಲ್ಲಿ ಅಪೂರ್ಣವಾಗಿ ಪ್ರಕಟಗೊಂಡಿದ್ದ ನಾಟಕವನ್ನು ಸ್ನೇಹಿತ ನೆನಪಿಸಿದ ನಂತರ ಸಂಪೂರ್ಣಗೊಳಿಸಿದ ಕುರಿತು ಕುವೆಂಪು ಅವರು ಮುನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಈ ವರೆಗೆ ನಾಲ್ಕಕ್ಕೂ ಕೆಚ್ಚು ಮುದ್ರಣಗಳನ್ನು ಈ ಪುಸ್ತಕ ಕಂಡಿದೆ. ಚಂದ್ರಹಾಸ ನಾಟಕದಲ್ಲಿ ಆದಿರಂಗ, ಮಧ್ಯರಂಗ ಹಾಗೂ ಅಂತ್ಯರಂಗ ಎಂಬ ಮೂರು ಭಾಗಗಳಿವೆ. ಮೊದಲನೇಯ ಭಾಗದಲ್ಲಿ ಒಂಬತ್ತು ದೃಶ್ಯಗಳಿವೆ. ಮಧ್ಯರಂಗದಲ್ಲಿ ಒಂದು ದೃಶ್ಯವಿದೆ ಹಾಗೂ ಅಂತ್ಯರಂಗದಲ್ಲಿ ಹತ್ತು ದೃಶ್ಯಗಳಿವೆ. ಒಟ್ಟು ಇಪ್ಪತ್ತು ದೃಶ್ಯಗಳಲ್ಲಿ ಕುವೆಂಪು ಅವರು ಲಕ್ಷ್ಮೀಶ ಬರೆದಿರುವಂತಹ ಜೈಮಿನಿ ಭಾರತದ ಚಂದ್ರಹಾಸನ ಕಥೆಯನ್ನು ಈ ನಾಟಕದ ಮೂಲಕ ವಿವರಿಸಿದ್ದಾರೆ. ಕುವೆಂಪು ಅವರು ಮುನ್ನುಡಿಯಲ್ಲಿ ಬರೆದಿರುವ ಪ್ರಕಾರ ಈ ನಾಟಕದಲ್ಲಿ ಕಂಡುಬರುವ ಚಂದ್ರಹಾಸ ಜೈಮಿನಿ ಭಾರತದ ಚಂದ್ರಹಾಸನ ಸಾರಸಂಸ್ಕಾರಗಳನ್ನು ಒಳಗೊಂಡಂತೆ ಭಾವನೆಯನ್ನು ಮೂಡಿಸುವ ಪುನರ್ಜನ್ಮೋಪಮ ಕೃತಿ. ಒಟ್ಟು 48 ಪಾತ್ರಗಳು ಈ ನಾಟಕದಲ್ಲಿನ ಸನ್ನಿವೇಶಗಳಿಗೆ ಜೀವ ತುಂಬುತ್ತಾರೆ. ನಾಟಕದ ಕೊನೆಯಲ್ಲಿ ನಾರದ ಭಕ್ತಿಸೂತ್ರಗಳಲ್ಲಿರುವ ಭಕ್ತಿ ಲಕ್ಷಣ ಮತ್ತು ಭಕ್ತಮಹಿಮೆಯನ್ನು, ಭಕ್ತಿ, ಪ್ರಾರ್ಥನಾ ಮತ್ತು ಕೃಪಾದೇವಿಯರ ವಾಣಿಯಲ್ಲಿ ಹಂಚಿ ಅಳವಡಿಸಲಾಗಿದೆ.
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MORE