‘ಬಿಂಬ ಮತ್ತು ಇತರ ನಾಟಕಗಳು’ ಲೇಖಕ ಗಿರೀಶ್ ಕಾರ್ನಾಡರ ಬಿಂಬ ಮತ್ತು ಮಾನಿಷಾದ ಹಾಗೂ ಮಹೇಶ ಎಲಕುಂಚವಾರ ಅವರ ವಾಸಾಂಸಿ ಜೀರ್ಣಾನಿ ಹಾಗೂ ಧರ್ಮಪುತ್ರ ಕತೆಗಳ ಸಂಕಲನ. ಕಾರ್ನಾಡರು ಮಹೇಶ ಎಲಕುಂಚವಾರ ಅವರ ಎರಡು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ, ಸಂಕಲಿಸಿದ್ದಾರೆ.
.
ನಾಟಕಕಾರ ಗಿರೀಶ್ ಕಾರ್ನಾಡ್ ಅವರು ರಂಗಭೂಮಿ- ಚಲನಚಿತ್ರ ನಟರಾಗಿ, ನಿರ್ದೇಶಕರಾಗಿ, ಸಂಗೀತ- ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ಬರೆದಿದ್ದರೂ ನಾಟಕಕಾರ ಎಂದೇ ಚಿರಪರಿಚಿತರು. ಗಿರೀಶ್ 1934ರ ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಉತ್ತರಕನ್ನಡದ ಶಿರಸಿಯಲ್ಲಿ ಪ್ರಾಥಮಿ ಶಿಕ್ಷಣ ಧಾರವಾಡದ ಬಾಸೆಲ್ ಮಿಶನ್ ಪ್ರೌಢಶಿಕ್ಷಣ, ಹಾಗೂ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ...
READ MORE