ಲೇಖಕ ವೇದಕುಮಾರ್ ಪ್ರಜಾಪತಿ ಅವರು ಬರೆದ ನಾಟಕ ಕೃತಿ-ವೀರ ಭೈರ್ಜಿ. ದಿ.ಶರಣಪ್ಪ ಬೈರ್ಜಿ ಅವರು ತಮ್ಮ ಜೀವನವನ್ನು ಹೈದರಾಬಾದ್ ವಿಮೋಚನೆಗಾಗಿ ಮೀಸಲಿಟ್ಟಿದ್ದರು. ಸಾಮಾನ್ಯ ಪ್ರಜೆಯಾಗಿಯೂ ಸಹ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಆದರದಿಂದ ಕಾಣುವ ಮಹಾನ್ ವ್ಯಕ್ತಿ. ಈಗಿನ ಯುವಕರಲ್ಲಿ ದೇಶಾಭಿಮಾನ ಕಡಿಮೆಯಾಗುತ್ತಿದೆ. ಇದಕ್ಕೆ ದೇಶಭಕ್ತಿ ನಾಟಕಗಳು ಇನ್ನು ಹೆಚ್ಚು ಹುಟ್ಟಿಕೊಂಡರೆ ಯುವಪೀಳಿಗೆಗೆ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ.ಎಂಬುದು ಈ ಕೃತಿಯ ಆಶಯ. ದಿ. ಶರಣಪ್ಪ ಬೈರ್ಜಿಯವರ ಸಾಧನೆ ನಾಟಕ ಕೃತಿಯಲ್ಲಿ ಸೂಕ್ಷ್ಮವಾಗಿ ದಾಖಲಿಸಿದೆ. ಜನರಿಂದ, ಜನರಿಗಾಗಿ, ಹಾಡುತ್ತ ಬಂದಿರುವ ಜಾನಪದ ಹಾಡುಗಳು, ಭಜನೆ ಹಾಡುಗಳು, ಸಂತರ ಹಾಡುಗಳು ಅಳವಡಿಸಿಕೊಳ್ಳಲಾಗಿದೆ. ಈ ನಾಟಕದಲ್ಲಿ ಕೆಲವು ಪಾತ್ರಗಳ ಹೆಸರುಗಳು ಕಾಲ್ಪನಿಕವಾಗಿದ್ದು, ನಾಟಕ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಇರತಕ್ಕಂತ ಸನ್ನಿವೇಶಗಳನ್ನು ಬಳಸಿಕೊಂಡು ನಾಟಕರೂಪದಲ್ಲಿ ಚರಿತ್ರೆಯನ್ನು ಓದುಗರ ಮುಂದೆ ಇಡುವ ಪ್ರಯತ್ನವಿದು.
©2024 Book Brahma Private Limited.