ರಂಗಕರ್ಮಿ ಸುಧೀರ್ ಅತ್ತಾವರ್ ಅವರ ಆಧುನಿಕ ಶೈಲಿಯ ಒಂದು ಸಮಕಾಲೀನ ಸಂಗೀತ ನಾಟಕ 'ಬಕಾವಲಿ ಹೂ'. ಈ ನಾಟಕದ ವಸ್ತು ಭಾರತೀಯರಿಗೆ ಚಿರಪರಿಚಿತ. ಭಾರತ ಉಪಖಂಡದ ಬಲು ಜನಪ್ರಿಯವಾಗಿರುವ 'ಗುಲ್ ಎ ಬಕಾವಲಿ' ಕಥಾನಕವನ್ನು ಕನ್ನಡ ನಾಟಕ ರೂಪಕ್ಕಿಳಿಸಿದ್ದಾರೆ ಸುಧೀರ್. ತನ್ನೊಳಗೆ ಭಾರತೀಯತೆಯನ್ನು ಬಚ್ಚಿಕೊಂಡಿರುವ ಈ ಪರ್ಶಿಯನ್ ಕಥಾನಕ, ತಾಜುಲ್ ಮುಲ್ಕ್ ಎನ್ನುವ ಅನಾಥ ರಾಜಕುಮಾರನ ಕರುಣೆ, ತ್ಯಾಗ, ವಿವೇಕ, ಜಾಣ್ಮ, ಸಾಹಸ, ನವಿರು ಶೃಂಗಾರಗಳ ಕಥೆ, ನಾಟಕೀಯತೆಗೆ ಶಕ್ತಿ ತುಂಬಬಲ್ಲ ಫ್ಯಾಂಟಸಿ, ರೋಚಕತೆಗಳು ಇಲ್ಲಿ ವ್ಯಾಪಕವಾಗಿರುವುದರಿಂದ, ಸಹಜವಾಗಿಯೇ ಉಜ್ವಲವಾದ ದೃಶ್ಯವೈಭವ ಮೇಳೈಸಿದೆ.
ಲೇಖಕ, ರಂಗಕರ್ಮಿ, ಕಲಾವಿದ ಸುಧೀರ್ ಅತ್ತಾವರ್ ಅವರು ಬಕಾವಲಿ ಹೂ ಎಂಬ ಕೃತಿಯನ್ನು ರಚಿಸಿದ್ದಾರೆ. ಆಧುನಿಕ ಶೈಲಿಯ ಒಂದು ಸಮಕಾಲೀನ ಸಂಗೀತ ನಾಟಕ 'ಬಕಾವಲಿ ಹೂ'. ಈ ನಾಟಕದ ವಸ್ತು 'ಗುಲ್ ಎ ಬಕಾವಲಿ' ಕಥಾನಕವನ್ನು ಕನ್ನಡ ನಾಟಕ ರೂಪಕ್ಕಿಳಿಸಿದ್ದಾರೆ. ಅವರ ಹುಟ್ಟೂರು ಅತ್ತಾವರ್. ಎಂಜಿನಿಯರಿಂಗ್ ಪದವೀಧರರು. ಸಿರಿಸಂಪಿಗೆ, ಕ್ರಾಂತಿ ಬಂತು ಕ್ರಾಂತಿ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿ, ನಟಿಸಿದ್ದಾರೆ. ಸಾಕ್ಷ್ಯಚಿತ್ರ-ಕಿರುಚಿತ್ರಗಳನ್ನೂ ನಿರ್ಮಿಸಿದ್ದು, ಚಲನಚಿತ್ರ ಗೀತ ರಚನಾಕಾರರು ಆಗಿದ್ದಾರೆ. ಇವರ ‘ಪ್ಯಾರಿ’ ಮೊದಲು ನಿರ್ದೇಶಿಸಿದ ಚಿತ್ರ. ಇವರ ‘ಬಕಾವಲಿಯ ಹೂ’ ನಾಟಕ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು (2016) ಅತ್ಯುತ್ತಮ ...
READ MOREನಾಟಕ-2016