‘ಎಟಿಎಂ ಮತ್ತಿತರ ನಾಟಕಗಳು’ ಲೇಖಕ ಡಾ. ಹೇಮಂತಕುಮಾರ್ ಅವರ ನಾಟಕ ಸಂಕಲನ. ಈ ಕಿರು ನಾಟಕ ಸಂಗ್ರಹಗಳ ಪುಸ್ತಕ ಶಾಲೆ, ಕಾಲೇಜಿನ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರಚಿತವಾಗಿದೆ. ಹಾಸ್ಯ, ವ್ಯಂಗ್ಯ, ವಿಡಂಬನೆಯೊಂದಿಗೆ, ಸಾಮಾಜಿಕ ಸಂದೇಶವನ್ನು ಹೊಂದಿರುವ ಇಲ್ಲಿಯ ಕಿರುನಾಟಕಗಳು, ಮಕ್ಕಳ- ವಿದ್ಯಾರ್ಥಿಗಳ ರಂಗಭೂಮಿಗೆ ಕೊಟ್ಟಿರುವ ಕೊಡುಗೆ
ಹೇಮಂತಕುಮಾರ್ ಕೊಲ್ಹಾಪುರ ಅವರು ಕಲಬುರಗಿಯ ನೂತನ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕರು. ನಂತರ ಅವರು ಪ್ರಾಂಶುಪಾಲರಾಗಿ 2020 ರ ನವೆಂಬರ್ ನಲ್ಲಿ ನಿವೃತ್ತರಾದರು. ಉತ್ತಮ ರಂಗಕರ್ಮಿಯೂ ಆಗಿದ್ದ ಅವರು 1972rರಲ್ಲಿ ಡಾ. ಗಿರಡ್ಡಿ ಗೋವಿಂದರಾಜು ಹಾಗೂ ಚಂದ್ರಕಾಂತ ಕುಸನೂರು ಅವರ ಜೊತೆಗೂಡಿ ಹವ್ಯಾಸಿ ರಂಗ ಮಾಧ್ಯಮ ಕಟ್ಟಿ ಬೆಳೆಸಿದವರು. ಆಕಾಶವಾಣಿ, ದೂದರ್ಶನದಲ್ಲೂ ಅಭಿನಯಿಸಿದ್ದಾರೆ. ಆಸ್ಫೋಟ ಸೇರಿದಂತೆ ಎರಡು (ಟಿ.ಎಸ್ಚ. ನಾಗಾಭರಣ ನಿದೇರ್ಶನದಲ್ಲಿ) ಲನಚಿತ್ರಗಳಲ್ಲಿ ನಟಿಸಿದ್ದಾರೆ. ಕೃತಿಗಳು: ತುಂತುರು, ಸಿಂಚನ (ಹನಿಗವನಗಳು), ಎಟಿಎಂ ಕಿರು ಪ್ರಹಸನಗಳು, ಆರು ಪ್ರಹಸನಗಳು (ಕಿರು ನಾಟಕಗಳ ಸಂಗ್ರಹ ಕೃತಿಗಳು) ಸೇರಿದಂತೆ ಒಟ್ಟು 8 ಕೃತಿಗಳನ್ನು ರಚಿಸಿದ್ದಾರೆ. 10-04-2021 ರಂದು ...
READ MORE