ʻನಾ ಬದುಕಲಿಕ್ಕೆ ಒಲ್ಲೆಪಾʼ ಇದು ಲೇಖಕ ಲೋಹಿತ ನಾಯ್ಕರ ಅವರ ದ್ವಿಪಾತ್ರ ನಾಟಕಗಳ ಸಂಕಲನ. ದ್ವಿಪಾತ್ರ ನಾಟಕಗಳಿಗೆ ಸಂಭಾಷಣೆಯೇ ಜೀವಾಳ. ಸಂಭಾಷಣೆ ಮೂಲಕವೇ ಕುತೂಹಲವನ್ನು ಹುಟ್ಟಿಸುವ ತಂತ್ರಗಾರಿಕೆಯೇ ನಾಟಕದ ಆಧಾರ.. ಒಂದು ಸಮಸ್ಯೆಯನ್ನು ಎದುರಿಗಿಟ್ಟುಕೊಂಡು ಅದರ ಪರ ಮತ್ತು ವಿರೋಧದ ವಾಗ್ವಾದದ ಮೂಲಕವೇ ನಾಟಕವನ್ನು ರಚಿಸುವ ಜಾಣ ಕಲಾತ್ಮಕತೆಯನ್ನು ಲೋಹಿತ ನಾಯ್ಕರ ಅವರು ಇಲ್ಲಿ ತೋರಿದ್ದಾರೆ.
ವೃತ್ತಿಯಿಂದ ವಕೀಲರಾಗಿರುವ ಲೋಹಿತ ನಾಯ್ಕರ್ ಅವರು ಪ್ರವೃತ್ತಿಯಿಂದ ಕತೆಗಾರ-ಲೇಖಕ. ಅಸ್ಸಾಂ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸಂದರ್ಶಕ ಪ್ರಾಧ್ಯಾಪಕರಾಗಿ ಲೋಹಿತ ನಾಯ್ಕರ ಕಾರ್ಯ ನಿರ್ವಹಿಸಿದ್ದಾರೆ. ಅವರ ಎರಡು ಕಥಾಸಂಕಲ ಪ್ರಕಟವಾಗಿವೆ.ದೃಷ್ಟಿಕೋನ ಮತ್ತು ಕಥಾನಾಯಕಿಯ ಕತೆ. ಕರ್ನಾಟಕ ಸರಕಾರದಲ್ಲಿ ಮಂತ್ರಿಯಾಗಿದ್ದ ಡಿ.ಕೆ.ನಾಯ್ಕರ್ ಅವರ ಪುತ್ರರು. ...
READ MORE