ಸಿ.ಪಿ.ನಾಗರಾಜ ಅವರ ನಾಟಕ ಸಂಕಲನ ಭಾಗೀರಥಿ. ಕೃತಿ ಬೆನ್ನುಡಿಯಲ್ಲಿ ಅನೇಕ ಸಾಹಿತಿಗಳು ಕೃತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 'ಕೆರೆಗೆ ಹಾರ' ಎಂಬ ಜನಪದ ಕಾವ್ಯವನ್ನು ಬಹು ಸುಂದರವಾಗಿ ನಾಟಕಕ್ಕೆ ಪರಿವರ್ತಿಸಿದ್ದೀರಿ. -ತ.ಸು.ಶಾಮರಾಯ ನಾಟಕಕಾರರಿಗೆ ಇರುವ ಗ್ರಾಮಜೀವನದ ವಾಸ್ತವ್ಯದ ಅರಿವು, ಅದಕ್ಕನುಗುಣವಾದ ಗ್ರಾಮ್ಯ ಭಾಷೆಯ ಸಮರ್ಥವಾದ ಬಳಕೆ ಈ ನಾಟಕದ ಶಕ್ತಿಯನ್ನು ಹೆಚ್ಚಿಸಿದೆ. -ಪುಸ್ತಕ ಲೋಕ ಭಾವತಪ್ತವಾಗಬಹುದಾದಂಥ ಸನ್ನಿವೇಶಗಳುಳ್ಳ ಈ ಪುಟ್ಟ ನಾಟಕದಲ್ಲಿ ನಾಟಕಕಾರರು ಸೆಂಟಿಮೆಂಟಲ್ ಆಗಿಲ್ಲ. ಭಾವಪೂರ್ಣ ವಾತಾವರಣ ಸೃಷ್ಟಿಸುವಲ್ಲಿ ಗ್ರಾಮ್ಯ ಭಾಷೆಯನ್ನು ಲೇಖಕರು ಸಮರ್ಥವಾಗಿ ಹದವರಿತು ಪ್ರಯೋಗಿಸಿದ್ದಾರೆ. -ಸಂಕ್ರಮಣ
©2024 Book Brahma Private Limited.