ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರ ನಾಟಕ ‘ನಿಯತ್ತಿಲ್ಲದವರು’ . ಮ. ತಿಪ್ಪೇಸ್ವಾಮಿ ಗೌಡರ ಹಾಗೂ ಬಿ.ಜಿ. ಸತ್ಯಮೂರ್ತಿ ಅವರು ನಾಟಕ ಕೃತಿಗೆ ಬೆನ್ನುಡಿ ಬರೆದು ‘ವಿಶೇಷ ರಂಗ ಪರಿಕರ, ಪ್ರಸಾದನ, ವೇಷ-ಭೂಷಣಗಳ ಹೆಚ್ಚು ಖರ್ಚಿಲ್ಲದೇ ನಾಟಕವನ್ನು ಅನುಭವಿಸಬಹುದು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಅಭಿನಯಿಸಲು ಈ ನಾಟಕ ಸೂಕ್ತವಾಗಿದೆ. ವರದಕ್ಷಿಣಿಯ ಒಂದು ಮುಖವನ್ನು ಮುಚ್ಚಿರುವ ತೆರೆಯನ್ನು ಅನಾವರಣಗೊಳಿಸುತ್ತದೆ.ನಕ್ಕು ನಗಿಸುವುದು ಅತಿಶಯದ ಧರ್ಮ ಎಂಬಂತೆ ಈ ನಾಟಕವು ಅತಿಶಯದ ಧರ್ಮವನ್ನು ಪ್ರತಿಪಾದಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಿಡಸಾಲೆ (ಜನನ: 05-02-1951) ಗ್ರಾಮದವರು. ತಂದೆ- ಮುಳವಾಗಲಯ್ಯ, ತಾಯಿ- ನಿಂಗಮ್ಮ. ನಿಡಸಾಲೆಯಲ್ಲಿ ಪ್ರಾಥಮಿಕ, ಹುಲಿಯೂರುದುರ್ಗದಲ್ಲಿ ಪ್ರೌಢಶಾಲೆಯವರೆಗೆ ವ್ಯಾಸಂಗ ಪೂರ್ಣಗೊಳಿಸಿದರು. 1968ರಲ್ಲಿ ಬೆಂಗಳೂರಿನ ಐ.ಟಿ.ಐ.ನಲ್ಲಿ ತರಬೇತಿ ಪಡೆದು, 1969ರಿಂದ ಕೃಷಿ ಇಲಾಖೆಯಲ್ಲಿ ಉದ್ಯೋಗ ಆರಂಭಿಸಿದರು. ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಪಿ.ಯು.ಸಿ ತೇರ್ಗಡೆ ಯಾಗಿ ಬಿ.ಕಾಂ.ಗೆ ಸೇರ್ಪಡೆಯಾದರು. ಹಿರಿಯ ಸಾಹಿತಿ ಬಿ.ಜಿ. ಸತ್ಯಮೂರ್ತಿಯವರ ಒಡನಾಟದಲ್ಲಿ 1971ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಅವರು ಸಣ್ಣ ಕಥೆ, ನಾಟಕ, ಕಾದಂಬರಿ ಸೇರಿದಂತೆ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಕೃತಿಗಳು: ಗೊಲ್ಲಳ್ಳಿ ತೋಟ’, ‘ಸಾಧನೆಯ ...
READ MORE