‘ಅಕಬರ’ ಜಯಪ್ರಕಾಶ ಮಾವಿನ ಕುಳಿ ಅವರ ನಾಟಕವಾಗಿದೆ. ಎರಡು ಸೌಹಾರ್ದ ಮನಸ್ಸುಗಳ ಮಧ್ಯೆ ಧರ್ಮದ ತೆರೆ ಅಡ್ಡ ಬಂದಾಗ ಏನಾಗುವುದೆಂಬ ನಿರೂಪಣೆ: ಸಾಮ್ರಾಟನೊಬ್ಬ ತನ್ನನ್ನು ಸುತ್ತುವರೆದ ಧಾರ್ಮಿಕ ವರ್ತುಲದಿಂದ ಹೊರಬಂದು ಸರ್ವಧರ್ಮ ಸಮನ್ವಯವನ್ನು ಈ ನಾಟಕ ತಿಳಿಸುತ್ತದೆ.
ಸಾಹಿತಿ ಜಯಪ್ರಕಾಶ ಮಾವಿನಕುಳಿ ಅವರು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯಿಕ ಕೃಷಿಯ ಜೊತೆಗೆ ನಾಟಕಕಾರರಾಗಿ, ರಂಗ ನಿರ್ದೇಶಕರಾಗಿ ಮತ್ತು ರಂಗಭೂಮಿ ಚಲನಚಿತ್ರ ನಟರಾಗಿಯೂ ಖ್ಯಾತಿ ಗಳಿಸಿದ್ದಾರೆ. ಕನ್ನಡ ಸಾಹಿತ್ಯಲೋಕಕ್ಕೆ ಹಲವು ನಾಟಕಗಳು, ಕಾದಂಬರಿ, ಸಣ್ಣಕತೆಗಳು, ಕಾವ್ಯ ಮತ್ತು ಇತರರೊಡನೆ ಹಲವು ಕೃತಿಗಳ ಸಂಪಾದನೆ ಸೇರಿದಂತೆ ಸುಮಾರು ಎಪ್ಪತ್ತು ಪುಸ್ತಕಗಳನ್ನು ನೀಡಿದ್ದಾರೆ. 1978ರಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು 4 ಕಥಾ ಸಂಕಲನಗಳು, 4 ಕವನ ಸಂಕಲನಗಳು, 7 ನಾಟಕಗಳು, 12 ಸಂಪಾದಿತ ಕೃತಿಗಳು ಹಾಗೂ ಇತರ ಕೃತಿಗಳೊಂದಿಗೆ 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 'ಪೊಲಿಟಿಕ್ಸ್ ಆ್ಯಂಡ್ ಕಲ್ಚರ್' ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ...
READ MOREಹೊಸತು- ಜುಲೈ -2003
ಮೊಗಲ್ ಸಾಮ್ರಾಟ, ಅಕ್ಬರನ ಕಾಲದ ಐತಿಹಾಸಿಕ ಘಟನೆ ಆಧಾರಿತ ಆಧುನಿಕ ನಾಟಕ. ಎರಡು ಸೌಹಾರ್ದ ಮನಸ್ಸುಗಳ ಮಧ್ಯೆ ಧರ್ಮದ ತೆರೆ ಅಡ್ಡ ಬಂದಾಗ ಏನಾಗುವುದೆಂಬ ನಿರೂಪಣೆ: ಸಾಮ್ರಾಟನೊಬ್ಬ ತನ್ನನ್ನು ಸುತ್ತುವರೆದ ಧಾರ್ಮಿಕ ವರ್ತುಲದಿಂದ ಹೊರಬಂದು ಸರ್ವಧರ್ಮ ಸಮನ್ವಯವನ್ನು ಪ್ರಾಮಾಣಿಕವಾಗಿ ಎತ್ತಿ ಹಿಡಿಯುವುದು ಈ ನಾಟಕದ ಕಥಾ ಸಾರಾ೦ಶ ಇಲ್ಲಿನ ಸಾಮ್ರಾಟ ಕೇವಲ ಅಕ್ಷರಗಳ ಪದ ಜೋಡಣೆಯ ಭಾಷೆಗೆ ಬೆಲೆ ಕೊಡದ ಆದರೆ ಭಾರೀ ಮಾನವತೆಯ ಕನಸು ಕಂಡಿರುವಾತ, ಓದಿ ನೋಡಿ.