ಲೇಖಕ ಟಿ.ಪಿ. ಕೈಲಾಸಂ ಅವರ ನಾಟಕ ಕೃತಿ-‘ನಮ್ಕ್ಳಬ್ಬು ಮತ್ತು ಕೈಲಾಸಂ ನೂಕ್ ನ ಕೆಲವು ಕಲ್ಪನೆಗಳು’. 1943 ರಲ್ಲಿ ಮೊದಲ ಮುದ್ರಣ ಕಂಡಿತ್ತು. ಕೈಲಾಸಂ ಅವರ ಕುಲುಮೆಯಲ್ಲಿ ರೂಪುಗೊಂಡ ಕೆಲ ಘಟನೆಗಳು ಮಹತ್ವವನ್ನು ಪಡೆದು, ಇಲ್ಲಿ ದಾಖಲಾಗಿವೆ. ಅದನ್ನು ಕೈಲಾಸಂ ನೂಕ್ -ಸುದೀರ್ಘ ಅಧ್ಯಾಯದಲ್ಲಿ ಕಾಣಬಹುದು. ಮೊಮ್ಮಗಳ ಮುಯ್ಯಿ, ಮಲೆಯಾಳೀ ತಿಪ್ಪಾರಳ್ಳೀ-ಈ ಎರಡೂ ಲೇಖನಗಳು ವೈ.ಎನ್. ಕೃಷ್ಣಮೂರ್ತಿ, ಕೈಲಾಸಂ ಅವರ ಹಾಸ್ಯದ ಹರಿಗೋಲು ಮತ್ತು ಗುಂಡೂ ಗುಳಿಗೆಗಳು-ಈ ಎರಡೂ ಲೇಖನಗಳು ಜಿ.ಪಿ. ರಾಜರತ್ನಂ, ವಿಚಿತ್ರ ವ್ಯಕ್ತಿ ಕೈಲಾಸಂ-ಪ್ರೊ.ಕೆ.ವಿ.ಅಯ್ಯರ್, ನಾನು ಕಂಡ ಕೈಲಾಸಂ-ಕಂದಾಡೆ ಕೃಷ್ಣ ಅಯ್ಯಂಗಾರ, ಕೈಲಾಸಂ : ಒಂದು ನೆನಪು-ಎಚ್.ವಿ. ವೆಂಕಟಸುಬ್ಬಯ್ಯ ಈ ಲೇಖನಗಳು ಇಲ್ಲಿ ಸಂಕಲನಗೊಂಡಿವೆ.
©2024 Book Brahma Private Limited.