ಡಾ. ಅಂಜನಾ ಕೃಷ್ಣಪ್ಪನವರು ಚಾಮರಸನ ಪ್ರಭುಲಿಂಗ ಲೀಲೆ ಕಾವ್ಯವನ್ನು ಆಧಾರವಾಗಿರಿಸಿ ರಚಿಸಿದ ಪುಟ್ಟ ನಾಟಕ ‘ನಟಿಸಿ ನಿಂತನೇಕೆ? ‘ಅಲ್ಲಮ’!’
ಇಂದಿನ ಆಧುನೀಕರಣ ಯುಗದಲ್ಲಿ ಓಡುಗಾಲಿಗಳನ್ನು ಕಾಲಿಗೆ ಕಟ್ಟಿಕೊಂಡು ಸಂಸ್ಕೃತಿ ಸಂಸಾರದ ಜಾಡು ತಿಳಿಯದೇ ಸಾಗಿರುವ ಜೀವನ ಕ್ರಮಕ್ಕೆ ಒಂದು ಅರಿವಿನ ರಹದಾರಿ ಅಂತರಂಗದ ಬೆಳಕಾಗಿ ಸುಸಂಸ್ಕೃತ ಜೀವನ ಕ್ರಮವನ್ನು ಜಾಗೃತಗೊಳಿಸುತ್ತದೆ. ನಾಟಕ ರಚನೆ ಸದ್ಯದ ಪರಿಸ್ಥಿತಿಯಲ್ಲಿ ಒಂದು ಉತ್ತಮ ಪ್ರಯೋಗ.
ಡಾ. ಅಂಜನಾ ಕೃಷ್ಣಪ್ಪನವರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದವರು. 1953ರ ಜೂನ್ 01ರಂದು ಜನನ. ಮಲ್ಲಿಗೆ ನಾಡಿನ ಕವಯತ್ರಿ ಹಾಗೂ ಲೇಖಕಿ. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ಕವನ ಸಂಕಲನ, ಕಾದಂಬರಿ, ಶ್ರೀ ಬೆಟ್ಟದ ಮಲ್ಲೇಶ್ವರ ಭಕ್ತೀಗೀತೆಗಳು ಹಾಗೂ ಶರಣರ ವಚನಗಳ ಕುರಿತ ಸಂಶೋಧನಾ ಗ್ರಂಥಗಳನ್ನು ಸಮರ್ಪಿಸಿದ್ದಾರೆ. ಅವರ ಕವಿತೆ, ಲೇಖನ, ಕಾದಂಬರಿಗಳು, ನಾಡಿನ ಅನೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ...
READ MORE