ಖ್ಯಾತ ಪತ್ರಕರ್ತ-ಲೇಖಕ-ಪ್ರಕಾಶನ-ಬೋಧಕ ಎಂದೇ ಖ್ಯಾತಿಯ ಪಿ.ಲಂಕೇಶ್ ಅವರು ಕವಿಗಳೂ ಹೌದು. ನಾಟಕಕಾರರೂ ಹೌದು. ಅವರು ರಚಿಸಿದ ತೆರೆಗಳು (1964) ಹಾಗೂ ನನ್ನ ತಂಗಿಗೊಂದು ಗಂಡು ಕೊಡಿ (1963) ಎಂಬ ಎರಡು ನಾಟಕಗಳ ಸಂಗ್ರಹ ಕೃತಿ ಇದು. ಸಾಂಪ್ರದಾಯಿಕ ವಿಚಾರಗಳನ್ನು ವೈಚಾರಿಕತೆಯ ಬೆಳೆಕಿನಲ್ಲಿ ನೋಡಿ ವಿಶ್ಲೇಷಿಸುವ ಗುಣಗಳನ್ನು ಈ ಎರಡೂ ನಾಟಕಗಳು ಒಳಗೊಂಡಿವೆ. ಪ್ರದರ್ಶನಾತ್ನಕವಾಗಿಯೂ ಉತ್ತಮ ಆಕರ್ಷಣೆ ಹೊಂದಿರುವ ಈ ನಾಟಕಗಳು, ಪ್ರೇಕ್ಷಕರ ಚಿಂತನೆಯನ್ನು ಪ್ರೇರೇಪಿಸಿ, ಆಧುನಿಕತೆಯತ್ತ ಮರ ಚಿಂತಿಸುವಂತೆ ಮಾಡುತ್ತವೆ.
ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...
READ MORE