ಲೇಖಕ ವಿವೇಕ ಶಾನಭಾಗ ಅವರ ನಾಟಕ ಕೃತಿ-‘ಇಲ್ಲಿರುವುದು ಸುಮ್ಮನೆ’. ಲೇಖಕರೇ ಹೇಳುವಂತೆ ‘ಈ ನಾಟಕವನ್ನು ಬೆಂಗಳೂರಿನ ಲೋಕಚರಿತ ತಂಡಕ್ಕಾಗಿ ಎರಡು ವರ್ಷಗಳ ಹಿಂದೆ ಬರೆದೆ. ದುರದೃಷ್ಟವಶಾತ್, ಕೋವಿಡ್ ಕಾರಣದಿಂದ ಇದನ್ನು ಪ್ರದರ್ಶಿಸುವ ಅವಕಾಶ ಒದಗಿ ಬರಲಿಲ್ಲ. ಪ್ರದರ್ಶನದ ನಂತರ ಪ್ರಕಟಿಸುವ ಇರಾದೆಯಿದ್ದರೂ ಅದು ಯಾವಾಗ ಕೈಗೂಡೀತೆಂಬ ಭರವಸೆಯಿಲ್ಲದ್ದರಿಂದ ನಾಟಕವನ್ನು ಈಗ ಓದುಗರ ಅವಗಾಹನೆಗೆ ಇಡುತ್ತಿದ್ದೇನೆ.
ಕಷ್ಟದ ಕಾಲವಿದು - ಒಂದು ಕಡೆಗೆ ನೀನು ಇಂಥ ನೆಲೆಗೆ ಸೇರಿದವನೆಂದು ಘೋಷಿಸಿಕೋ ಎಂದು ಒತ್ತಾಯಿಸುವ ಜನನಾಯಕರು, ಇನ್ನೊಂದೆಡೆ ನಕಾಶೆಯಲ್ಲಿರುವ ನೆಲವನ್ನೇ ಇಲ್ಲದ ಹಾಗೆ ಮಾಡುವ ಭೂಗಳ್ಳರು, ಇವತ್ತು ಪರಸ್ಪರ ಕೈಕೂಡಿಸಿದ್ದಾರೆ. ಇವರಿಬ್ಬರ ಭೂಗತ ಸಂಬಂಧದ ನೆಲೆಗಟ್ಟಿನ ಮೇಲೆ ಇಂದಿನ ಮಹಾನಗರಗಳು ಮೇಲೆದ್ದು ನಿಂತು ನಮ್ಮನ್ನು ಕೈ ಬೀಸಿ ಕರೆಯುತ್ತಿವೆ. ಆ ಕರೆಗೆ ಓಗೊಟ್ಟ ನಾಗರಿಕ ಸಮಾಜದ ಸುಪ್ತಪ್ರಜ್ಞೆಯೊಳಕ್ಕೆ ಸ್ವಂತದ ನೆಲ ಮತ್ತು ನೆಲೆಗಳ ಹುಡುಕಾಟದ ಕನಸಿದೆ, ಹಳವಂಡವಿದೆ. ಇಂಥ ಹೊಸಗಾಲದ ಜಗತ್ತಿನ ಒಂದು ನಾಟಕೀಯ ಆಖ್ಯಾನವನ್ನು ಪ್ರಸ್ತುತ ಕೃತಿಯು ಆದಷ್ಟೂ ಉದ್ವೇಗ ಮತ್ತು ಗದ್ದಲಗಳಿಲ್ಲದೆ ನಮ್ಮ ಕಿವಿಯೊಳಕ್ಕೆ ಉಸುರುತ್ತಿರುವಂತೆ ತೋರುತ್ತಿದೆ’ ಎಂದು ಹೇಳಿದ್ದಾರೆ.
ವಿವೇಕ ಶಾನಭಾಗ ಅವರು ಉತ್ತರ ಕನ್ನಡ ಜಿಲ್ಲೆಯವರು. ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ವಿವೇಕ ಅವರು 'ದೇಶಕಾಲ' ಎಂಬ ಸಾಹಿತ್ಯಕ ಪತ್ರಿಕೆಯನ್ನೂ ಏಳು ವರ್ಷ ಕಾಲ ನಡೆಸಿದರು. ಹೊಸ ಬಗೆಯ ಕಥೆ ಕಟ್ಟುವ ಅವರು ಸಣ್ಣ ಊರು ಅಥವಾ ವಿಶಾಲ ಜಗತ್ತುಗಳೆರಡರಲ್ಲಿಯೂ ಮನುಷ್ಯರ ಮನಸ್ಸಿನ ಆಯಾಮ ಗುರುತಿಸಬಲ್ಲರು. ಅವರ ’ಘಾಚರ್ ಘೋಚರ್ ನೀಳ್ಗತೆಯ ಇಂಗ್ಲಿಷ್ ಅನುವಾದ ಜಗತ್ತಿನ ಸಾಹಿತ್ಯ ವಲಯದ ಗಮನ ಸೆಳೆದಿದೆ. ಲಂಡನ್, ಅಮೆರಿಕಗಳಲ್ಲಿ ಪ್ರತ್ಯೇಕ ಆವೃತ್ತಿ ಕಂಡಿರುವ ಈ ಕೃತಿ ಜಗತ್ತಿನ 18 ಭಾಷೆಗಳಿಗೆ ಅನುವಾದಗೊಂಡು ಮಚ್ಚುಗೆ ಗಳಿಸಿದೆ. ಅಂಕುರ, ಲಂಗರು, ಹುಲಿಸವಾರಿ, ಮತ್ತೊಬ್ಬನ ...
READ MORE