ಲೇಖಕ ರಾಜು ಭಂಡಾರಿ ಅವರ ನಾಟಕ ’ಅಗ್ನಿ ಮರ್ಧನ’. ಕೃತಿಗೆ ಮುನ್ನುಡಿ ಬರೆದ ಪತ್ರಕರ್ತ ರಾಜು ಮಳವಳ್ಳಿ ’ಇಡೀ ನಾಟಕದ ಕಥಾಹಂದರ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಸದಾಶಯ ಹೊಂದಿರುವುದು ನಾಟಕಕಾರನ ಬದ್ಧತೆಗೆ ದ್ಯೋತಕ. ಸಂಭಾಷಣೆಗಳು ಹರಿತವಾಗಿರುವುದೇನೋ ಸರಿ. ಆದರೆ, ಕೊಂಚ ಭಾರವೆನಿಸದೆ ಇರದು. ವ್ಯವಸ್ಥೆಯ ಅವ್ಯವಸ್ಥೆಯ ಬಗ್ಗೆ ಬಿಸಿರಕ್ತದ ಯುವಕನಲ್ಲಿ ಉಕ್ಕಿಸಬಹುದಾದ ಆಕ್ರೋಶ, ಸಿಟ್ಟು, ಸೆಡವುಗಳೆಲ್ಲವೂ ರಾಜು ಭಂಡಾರಿ ಅವರ ಲೇಖನಿಯಲ್ಲಿ ಹರಿತವಾಗಿಯೇ ಹರಿದಿದೆ.’ ಎಂದು ಪ್ರಶಂಸಿದ್ದಾರೆ.
ಲೇಖಕ ರಾಜು ಭಂಡಾರಿ ರಾಜಾವರ್ತ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಕಳೆದ 15 ವರ್ಷಗಳಿಂದ ರಂಗಭೂಮಿಯಲ್ಲಿ ನಟ, ನಿರ್ದೇಶಕ, ನಾಟಕ ರಚನಾಕಾರರಾಗಿ ಅನುಭವವಿದೆ. ಕೃತಿಗಳು: ಮನ್ವಂತರ,ಮಧಮರ್ತ್ಯ, ಅಗ್ನಿ ಮರ್ಧನ, ಬಂಗಾರ ತೀರದಲ್ಲಿ ಬೊಗಸೆ ನೀರು. ಇವರ ಮನ್ವಂತರ ಕೃತಿಗೆ ರಾಜ್ಯ ಅರಳು ಪುರಸ್ಕಾರ ಲಭಿಸಿದೆ. ...
READ MORE