ಏಕಲವ್ಯ ಪುರಾಣ ಪುರುಷರ ಜೀವನಗಾಥೆಯ ಪುಸ್ತಕವನ್ನು ಲೇಖಕಿ ನಾಗಮಣಿ ಎಸ್.ರಾವ್ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಏಕಲವ್ಯನ ಕುರಿತಾಗಿ ವಿದ್ಯಾರ್ಥಿಯ ಹಿರಿಮೆ ಕುಲದಲ್ಲಿಲ್ಲ, ಶ್ರದ್ಧೆಯಲ್ಲಿದೆ ಎಂಬುದನ್ನು ತೋರಿಸಿ ಕೊಟ್ಟ ಅಮರ ವಿದ್ಯಾರ್ಥಿ. ಗುರುವಿನ ಪ್ರತಿಮೆಯ ಮುಂದೆ ತಾನೇ ಅಭ್ಯಾಸ ಮಾಡಿ ಅಸಮಾನ ಬಿಲೆರನಾದ. ಗುರುದಕ್ಷಿಣೆಯಾಗಿ ಬಲಹೆಬ್ಬೆರಳನ್ನು ಗುರು ಬಯಸಿದಾಗ ನಗುನಗುತ್ತ ಅದನ್ನು ಅರ್ಪಿಸಿದ. ಕಾಡಿನಲ್ಲಿ ಹುಟ್ಟಿ ಬೆಳೆದ ಹುಡುಗ ತಿಳಿದವರು ಎನ್ನಿಸಿಕೊಂಡವರಿಗೆ ಮೇಲ್ಪಂಕ್ತಿಯಾದ ಎಂದು ಏಕಲವ್ಯನ ವ್ಯಕ್ತಿತ್ವದ ಪರಿಚಯವನ್ನು ನಾಗಮಣಿ ಒದುಗರಿಗೆ ಮಡುತ್ತಾರೆ. ಶ್ರದ್ಧೆ ಇದ್ದರೆ ಯಾವುದನ್ನೂ ಬೆಕಾದರೂ ಸಾಧಿಸಬಹುದು ಈ ನಿಟ್ಟಿನಲ್ಲಿ ಯೋಚಿಸಿದಾಗ ಪೌರಾಣಿಕ ಕಥೆಗಳಳಲ್ಲಿ ಥಟ್ಟನೆ ನೆನಪಿಗೆ ಬರುವುದು ಏಕಲವ್ಯ. ಹಾಗಾಗಿ ಎಷ್ಟೇ ಯುಗಗಳು ಕಳೆದರೂ ಏಕಲವ್ಯ ವೀರತನ ಧೈರ್ಯ ಶ್ರದ್ಧೆ ಜೀವಂತ ಎಂದು ಈ ಕೃತಿಯಲ್ಲಿ ರಚಿತವಾಗಿದೆ.
©2024 Book Brahma Private Limited.