ಲೇಖಕಿ ಆಶಾ ರಘು ಅವರ ನಾಟಕ ಕೃತಿ ʻಪೂತನಿʼ ಹಾಗೂ ಮತ್ತಿತರ ನಾಟಕಗಳು. ಪುಸ್ತಕದ ಮುನ್ನುಡಿಯಲ್ಲಿ ರಂಗ ನಿರ್ದೇಶಕ ಡಾ. ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರು, “ 'ಪೂತನಿ ಮತ್ತಿತರ ನಾಟಕಗಳು' ಕೃತಿಯಲ್ಲಿ ಒಟ್ಟು ಒಂಭತ್ತು ನಾಟಕಗಳು ಇದ್ದಾವೆ. ಬುದ್ದನ ಕಥೆ ಆಧಾರಿತ 'ಪಟಾಚಾರ', ಮಹಾಭಾರತದ ಕಥೆ ಆಧಾರಿತ, ಏಕವ್ಯಕ್ತಿ ರಂಗಪ್ರಸ್ತುತಿ 'ಪೂತನಿ', ರಾಮಾಯಣ ಕಥೆ ಆಧಾರಿತ ಗೀತನಾಟಕ `ಚೂಡಾಮಣಿ', ಹೆಣ್ಣಿನ ಮೇಲಿನ ಶೋಷಣೆ ಹಾಗೂ ಕೌರ್ಯವನ್ನು ಬಿಂಬಿಸುವ 'ಕ್ಷಮಾದಾನ' ಹಾಗೂ ಮಕ್ಕಳ ನಾಟಕಗಳಾದ 'ಬಂಗಾರದ ಪಂಜರ', 'ಎಣ್ಣೆಗಾಯ್', ʻಕೃಷ್ಟ ಸುದಾಮ', 'ಒನಕೆ ಪೂಜೆʼ, ʻಚಿನ್ನದ ಮಾವಿನ ಹಣ್ಣುʼ. ಹೀಗೆ ಹಲವು ವಸ್ತುಗಳನ್ನು ಗರ್ಭೀಕರಿಸಿಕೊಂಡಿರುವ ನಾಟಕಗಳನ್ನು ರಂಗಕ್ಕೆ ಕೊಡುಗೆ ನೀಡುವುದರ ಮೂಲಕ ಆಶಾ ರಘು ಅವರು ಮಹಿಳಾ ನಾಟಕಕಾರ್ತಿಯರ ಕೊರತೆಯನ್ನು ನೀಗಿದ್ದಾರೆ. ಇಲ್ಲಿರುವ ಬಹುತೇಕ ನಾಟಕಗಳು ಮಹಿಳಾಪ್ರಧಾನ ನಾಟಕಗಳಾಗಿ ಸ್ತ್ರೀ ಸಂವೇದನೆಯನ್ನು ಪ್ರತಿಬಿಂಬಿಸುತ್ತವೆ. ಹೆಣ್ಣಿನ ದನಿಯಾಗಿ ಮಾತಾಡುತ್ತವೆ” ಎಂದು ಹೇಳಿದ್ದಾರೆ.
©2024 Book Brahma Private Limited.