‘ವಿರಾಟ ರಾಜ್ಯದ ಇಬ್ಬಂದಿಗಳು’ ವಿ.ಗಣೇಶ್ ಅವರ ಸಂಪಾದಿತ ಕೃತಿಯಾಗಿದೆ. ವಿರಾಟ ರಾಜ್ಯ ಇಬ್ಬಂದಿಯು ಒಂದು ಏಕಾಂಕ ನಾಟಕ. ಇಲ್ಲಿ ಆಧುನಿಕ ರಾಜಕೀಯದಲ್ಲಿ ಮಹಾಭಾರತದ ಪಾಂಡವರ ಕೌರವರ ಜಂಜಾಟದ ದೃಶ್ಯಗಳನ್ನು ವಿಡಂಬನಾತ್ಮಕವಾಗಿ ಬರೆಯಲಾಗಿದೆ. ಪಂಚ ಪಾಂಡವರು ಕೃಷ್ಣ, ದ್ರೌಪತಿ ದುರ್ಯೋಧನ, ದುಶ್ಯಾಸನ, ಕೀಚಕ ಮುಂತಾದ ಎಲ್ಲಾ ಪಾತ್ರಧಾರಿಗಳು ಇಂದಿನ ರಾಜಕೀಯ ವ್ಯಕ್ತಿಗಳ ಗುಣಗಳನ್ನು ಹೊತ್ತುಕೊಂಡು ಮೆರೆಯುತ್ತಾರೆ. ಕೊನೆಗೆಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಹೇಗೆ ನಾಶವಾಗುತ್ತಾರೆ ಎಂಬುದನ್ನು ಕೂಡ ಕಾಣಬಹುದು.
ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...
READ MORE