ನಾಟಕದ ಪ್ರತಿಯೊಂದು ಪಾತ್ರಕ್ಕೂ ಒಂದಿಲ್ಲೊಂದು ನಿರೀಕ್ಷೆಗಳಿರುತ್ತವೆ. ಮಗಳಿಗೆ ಒಳ್ಳೆಯ ಗಂಡ ಸಿಗಲಿ, ಎಲ್ಲೋ ಮರೆಯಾದ ಗಂಡ ಅದಷ್ಟು ಬೇಗ ಹಿಂದಿರುಗಿ ಬರಲಿ, ಕಛೇರಿಯಲ್ಲಿ ಕೆಲಸ ಚೆನ್ನಾಗಿ ಆಗಬೇಕು, ಹೊಸ ಆರ್ಡರ್ ಗಳು ಸಿಗಬೇಕು, ಕಂಪನಿ ದೊಡ್ಡ ಮಟ್ಟದಲ್ಲ ಬೆಳೆಯಬೇಕು ಅಂತ ಅಂದುಕೊಳ್ಳುವ ಕಂಪನಿಯ ಬಾಸ್, ಮದುವೆಯ ತಯಾರಿ ಸರಳವಾದರೂ ಚೆನ್ನಾಗಿ ಆಗಬೇಕು ಎನ್ನುವ ಗೆಳತಿ, ಇವೆಲ್ಲವುಗಳಿಂದ ಹೊರತಾಗಿ ಮನೆಗೆ ಬೇಗ ಹೋಗಿ ಹೆಂಡತಿ ಜೊತೆ ಇರಬೇಕು ಎನ್ನುವ ಕ್ಯಾಬ್ ಡ್ರೈವರ್ -ಹೀಗೆ ಎಲ್ಲರಿಗೂ ಅವರದ್ದೇ ಆದ ನಿರೀಕ್ಷೆಗಳು. ಆದರೆ ಆಗುವುದೆಲ್ಲಾ ಅನಿರೀಕ್ಷಿತ. ಕಾಲನ ಕೈಗನ್ನಡಿಯಲ್ಲಿ ಇನ್ನು ಅದೇನೇನು ಆಗಬೇಕೆಂದು ಉಳಿದಿದೆಯೋ?! ಭಾರತದಂತಹ ಸಾಂಸ್ಕೃತಿಕ ದೇಶದ ಒಂದೊಂದು ವ್ಯಕ್ತಿತ್ವವನ್ನು ನಾಟಕದ ಪ್ರತಿಯೊಂದು ಪಾತ್ರಗಳು ತೋರಿಸುತ್ತವೆ. ಪತಿಯ ಅಗಲಿಕೆಯಿಂದ ಸಂಸಾರದ ಸುಖ ಅನುಭವಿಸದ ತಾಯಿ, ತಂದೆಯನ್ನು, ಆತನ ಪ್ರೀತಿಯನ್ನು ಎಂದೂ ಕಂಡಿರದ ಮಗಳು ಕಥೆಯ ನಾಯಕಿ ಮನೋವತಿ, ಸಂಸಾರವೇ ಜೀವನ ಎನ್ನುವ ಕ್ಯಾಬ್ ಡ್ರೈವರ್, ತಂದೆಯನ್ನು ಕಳೆದುಕೊಂಡ ವರುಷವೇ ನಂಬಿದ ನಿಲುವುಗಳಿಗೆ ಎಳ್ಳುನೀರು ಬಿಟ್ಟು ಮದುವೆ ಆಗಬೇಕು ಎಂದು ನಿರ್ಧರಿಸುವ ಗೆಳತಿ, ಜೀವನದ ದಿಕ್ಕೇ ಕಾಣದೆ ಮದುವೆಯೆಂಬ ಪರಭಾರೆಯನ್ನು ಹೊರಲಾಗದೆ ಹೋಗುವ ಜೀವದ ಗೆಳೆಯ... ಹೀಗೆ ಹತ್ತು ಹಲವು ಮನೋರೂಪಗಳ ಪಾತ್ರಗಳಿರುವ ರೂಪಕ ಈ ನಾಟಕ ಎಂದು ಮನೋವತಿ ಕೃತಿ ಕುರಿತು ಕಿರಣ್ ವಟಿ ಬೆನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.