‘ಮಂಕುತಿಮ್ಮನ ಕಗ್ಗ’ ಖ್ಯಾತಿಯ ಡಿ.ವಿ. ಗುಂಡಪ್ಪ (ಡಿವಿಜಿ) ಅವರ ಕೃತಿ-ಪ್ರಹಸನತ್ರಯೀ. ಮೂರು ಹಾಸ್ಯ ಪ್ರಸಂಗಗಳನ್ನು ಕೃತಿಯಲ್ಲಿ ಸಂಕಲಿಸಲಾಗಿದೆ. ಜಾಕ್ ಕೇಡ್, ಮಹಾಚುನಾವಣೆ ಹಾಗೂ ಗರ್ದಭ ವಿಜಯ ಎಂಬ ಪ್ರಸಂಗಗಳ ನಾಟಕಗಳಿವು. ಈ ಎಲ್ಲ ನಾಟಕಗಳ ಮೂಲಕ ಭಾವ-ವ್ಯಂಗ್ಯ-ವಿಡಂಬನೆ. ಸಾಮಾಜಿಕ ವಿದ್ಯಮಾನಗಳನ್ನು ಲೇಖಕರು ಗ್ರಹಿಸುವ ರೀತಿ ಅನನ್ಯ, ಸೂಕ್ಷ್ಮ, ತೀರಾ ಸಣ್ಣ ಸಂಗತಿಯನ್ನು ತಮ್ಮ ಒಳನೋಟದಿಂದ ಅದಕ್ಕೆ ಸಾಹಿತ್ಕ ಸ್ಪರ್ಶ ನೀಡುವ ಮೂಲಕ ಸಾಹಿತ್ಯಕ ಮೌಲ್ಯ ತಂದು ಕೊಟ್ಟಿದ್ದನ್ನು ಕಾಣಬಹುದು.
ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ...
READ MORE