ಹನ್ನೆರಡನೇ ಶತಮಾನದ ಶರಣಮಾರ್ಗದ ವಸ್ತುವನ್ನಾಧರಿಸಿದ ಕಥೆಯಾಗಿದ್ದು, ಅಂತರ್ಜಾತೀಯ ವಿವಾಹದ ವಸ್ತುವಿನಿಂದ ಅತೀತವಾಗಿ ಚಿತ್ರಣಗೊಂಡಿದೆ. ಚರಿತ್ರೆಯ ವಾಸ್ತವ ಹಾಗೂ ಕಲ್ಪನೆಯ ಪಾತ್ರ - ಸನ್ನಿವೇಶಗಳೊಂದಿಗೆ ರೂಪ ಪಡೆದಿದ್ದು, ಹಿತಮಿತವಾದ ಪಾತ್ರಗಳಿದ್ದು, ಚಿಕ್ಕ ಚಿಕ್ಕ ಸನ್ನಿವೇಶ-ಸಂಭಾಷಣೆಗಳೊಂದಿಗೆ ಕಥಾಕೇಂದ್ರಿತವಾಗಿ ಬೆಳೆದಿದೆ. - ಡಾ. ಅರವಿಂದ ಮಾಲಗತ್ತಿ
ತಳಸಮುದಾಯದ ಗೋಗಾಹಿ ಶಂಕರ ವೈದ್ಯನಾಗುವುದು, ವೈದ್ಯರಾದ ದಾಮೋದರ ಭಟ್ಟರ ಪಾತ್ರ ನಾಯಕನ ಪಾತ್ರಕ್ಕಿಂತ ಮಿಗಿಲಾಗಿ ಮಿಂಚಿದೆ. ಇದು ಒಂದು ಕ್ಷಣ ಗೋರೂರರ 'ಹೇಮಾವತಿ' ಕಾದಂಬರಿಯನ್ನು ನೆನಪಿಸುತ್ತದೆ.
©2024 Book Brahma Private Limited.