ಕರ್ನಾಟಕ ಸಾಹಿತ್ಯದ ಬರ್ನಾಡ್ ಷಾ ಎಂದೇ ಖ್ಯಾತಿಯ ಟಿ.ಪಿ.ಕೈಲಾಸಂ ಅವರ ಕೀಚಕ ನಾಟಕವನ್ನು ಜೆ.ಪಿ.ರಾಜರತ್ನಂ ಅವರು ಸರಳೀಕರಿಸಿದ್ದೇ ಈ ಕೃತಿ-ಕೀಚಕ. ಈ ಕೃತಿಯು ಮೊದಲು 1948ರಲ್ಲಿ, 1950ರಲ್ಲಿ ಹಾಗೂ 1969ರಲ್ಲಿ ಪ್ರಕಟಗೊಂಡು, ಇದೀಗ 4ನೇ ಮುದ್ರಣ ಕಾಣುತ್ತಿದೆ. ಕೀಚಕ ನಾಟಕವನ್ನು ಬರೆದು ಮುಗಿಸುವುದರೊಳಗೆ ಕೈಲಾಸಂ ತೀರಿಹೋದರು. ಆದರೆ, ಕಥಾವಸ್ತುವಿನ ಬಗ್ಗೆ ಅವರ ಒಡನಾಡಿ ರಾಮರಾಯ ಅವರಲ್ಲಿ ಚರ್ಚಿಸಿದ್ದರು. ಆ ಕೃತಿಯನ್ನು ಕನ್ನಡಕ್ಕೆ ತರುವ ಪ್ರಯತ್ನದ ಭಾಗವಾಗಿ ಜೆ.ಪಿ.ರಾಜರತ್ನಂ ಅವರು ರಾಮರಾಯರನ್ನು ಕೇಳಿಕೊಂಡು ಅದನ್ನು ಇಂಗ್ಲಿಷಿನಲ್ಲಿ ಬರೆಯಿಸಿ ನಂತರ ಅದನ್ನು ಕನ್ನಡಕ್ಕೆ ಭಾಷಾಂತರಿಸಲಾಯಿತು. ಈ ‘ಕೀಚಕ’ನನ್ನು ನಾಟಕ ಎಂದು ಪರಿಗಣಿಸಿದೇ ಕಲ್ಪನೆ ಎಂದು ಪರಿಗಣಿಸಿ, ಕೈಲಾಸಂ ಇದ್ದರೆ ಇನ್ನೂ ಉತ್ತಮವಾಗಿ ರಚನೆಗೊಳ್ಳುತ್ತಿತ್ತೇನೋ ಎಂದು ಜೆ.ಪಿ. ರಾಜರತ್ನಂ ಅವರು ಕೃತಿಗೆ ಬರೆದ ಪ್ರಸ್ತಾವನೆಯಲ್ಲಿ ಮನವಿ ಮಾಡಿದ್ದಾರೆ.
©2024 Book Brahma Private Limited.