‘ಸ್ವಾರ್ಥಿಗಳ ಸ್ವರ್ಗ’ ಕೇಶವ ಶರ್ಮ ಅವರ ನಾಟಕವಾಗಿದೆ. ಭ್ರಷ್ಟ ರಾಜಕಾರಣ ಈ ನಾಟಕದ ಕಥಾವಸ್ತು. ಇಲ್ಲಿನ ಸಮಾಜ ಕಂಟಕನೊಬ್ಬ ಅಧಿಕಾರಿ ರಾಜಕಾರಣಿ, ಶ್ರೀಮಂತ, ಜೊತೆಗೆ ಸ್ವಾರ್ಥಿಗಳ ಸ್ವರ್ಗ ದೀರ್ಘಾಯುಷಿ. ಈತನ ಸುತ್ತ ನೆರೆದಿರುವ ದುಷ್ಟಕೂಟಕ್ಕೆ ಕಪಟ ಸ್ವಾಮೀಜಿಯೋರ್ವನ ಆಶೀರ್ವಾದದ ರಕ್ಷಣೆ, ಹೊಸತೇನೂ ಅಲ್ಲದ ಜನರ ಪಾಲಿಗೆ ನಿತ್ಯವಿಧಿಯಾಗಿರುವ ಈ ಗೋಳು ಭಾರತದ ಸ್ವಾತಂತ್ರೋತ್ತರ ಚರಿತ್ರೆಯೆಂದರೂ ಸರಿಯೆ ! ಆದರೂ ಉತ್ತಮ ಆದರ್ಶವೊಂದರ ಗೆಲುವನ್ನು ಪ್ರತಿಪಾದಿಸುವ, ಋಜು ಮಾರ್ಗದ ಕಡೆ ದಾರಿ ತೋರಿಸುವ ಫಲಕ ಇಲ್ಲಿದೆ.
ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ...
READ MORE