ಉಂಡಾಡಿ ಗುಂಡ (ನಾಟಕ)

Author : ಪರ್ವತವಾಣಿ

Pages 53

₹ 30.00




Year of Publication: 2011
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002

Synopsys

ಪರ್ವತವಾಣಿ ಎಂದೇ ಖ್ಯಾತರಾದ ಪರ್ವತವಾಡಿ ನರಸಿಂಗರಾವ್ ಬರೆದ ನಾಟಕ ಕೃತಿ-ಉಂಡಾಡಿ ಗುಂಡ. ಕನ್ನಡ ನಾಡು ಏಕೀಕರಣಗೊಂಡು 55 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಪ್ರಕಟಿಸಿದ ಕನ್ನಡ ಉತ್ತಮ ಕೃತಿಗಳ ಪೈಕಿ ಉಂಡಾಡಿ ಗುಂಡ ಸಹ ಒಂದು. ಉತ್ತಮಕಥೆ. ಬರವಣಿಗೆ ನಿಪುಣತೆ, ನಿರೂಪಣಾ ಶೈಲಿಯಿಂದ ನಾಟಕ ಗಮನ ಸೆಳೆಯುತ್ತದೆ.

About the Author

ಪರ್ವತವಾಣಿ
(02 September 1911 - 05 March 1994)

’ಪರ್ವತವಾಣಿ’ ಎಂದು ಜನಪ್ರಿಯರಾಗಿದ್ದ ಕನ್ನಡದ ನಾಟಕಕಾರ, ನಟ, ನಿರ್ದೇಶಕ ಪರ್ವತ ವಾಡಿ ನರಸಿಂಗರಾವ್.  1911ರ ಸೆಪ್ಟಂಬರ್‌ 2 ತಮಿಳುನಾಡಿನ ಹತ್ತಿರದ ಹಳ್ಳಿ ಪರ್ವತವಾಡಿಯಲ್ಲಿ ಜನಿಸಿದರು. ಇವರ ಕಂಚಿನ ಕಂಠವನ್ನು ಕೇಳಿದ ವಿ. ಕೃ. ಗೋಕಾಕ್‌ ನೀಡಿದ ಸೂಚನೆಯ ಮೇರೆಗೆ ಪರ್ವತವಾಡಿಯವರು ’ಪರ್ವತವಾಣಿ’ ಆದರು. ಪರ್ವತವಾಣಿಯವರು ತಾರಾಮಂಡಲವೆಂಬ ಹವ್ಯಾಸಿ ನಾಟಕತಂಡವನ್ನು, ಆನಂತರ ನಂಕಪ್ನಿ ಎಂಬ ನಾಟಕತಂಡವನ್ನು ಕಟ್ಟಿ ಸಾವಿರಾರು ನಾಟಕಪ್ರಯೋಗಗಳನ್ನು ಮಾಡಿದರು. ಸ್ವತಃ ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅಲ್ಲದೆ ’ಭಾಗ್ಯದ ಲಕ್ಷ್ಮೀ ಬಾರಮ್ಮ’ ಎನ್ನುವ ಚಲನಚಿತ್ರದಲ್ಲೂ ಅಭಿನಯಿಸಿದ್ದಾರೆ. ಅವರು ಸುಮಾರು 83 ನಾಟಕಗಳನ್ನು ರಚಿಸಿದ್ದು ಮೊದಲ ನಾಟಕ ’ಮಾಲತಿ’. ಹಣಹದ್ದು, ...

READ MORE

Related Books