ಆವೆಯ ಮಣ್ಣಿನ ಆಟದ ಬಂಡಿ

Author : ಬನ್ನಂಜೆ ಗೋವಿಂದಾಚಾರ್ಯ

Pages 220

₹ 60.00




Year of Publication: 1996
Published by: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ
Address: ಎಂ.ಜಿ.ಎಂ. ಕಾಲೇಜು, ಉಡುಪಿ-576102

Synopsys

ಸಾರ್ವಜನಿಕ ಮೌಲ್ಯದ ಸಂಸ್ಕೃತ ಸಾಮಾಜಿಕ ನಾಟಕವಾದ ಶೂದ್ರಕ ಕವಿಯ ‘ಮೃಚ್ಛಕಟಿಕ’ದ ಕನ್ನಡ ಅನುವಾದ ಕೃತಿಯೇ-ಆವೆಯ ಮಣ್ಣಿನ ಆಟದ ಬಂಡಿ. ಬನ್ನಂಜೆ ಗೋವಿಂದಚಾರ್ಯರು ಅನುವಾದಕರು. ಮೃತ್ ಎಂದರೆ ಆಟಿಕೆಗಳನ್ನು ತಯಾರಿಸುವವ, ಶತಕಟಿಕಾ ಎಂದರೆ ಆಟದ ಬಂಡಿ. ಆಟಿಕೆ ತಯಾರಿಸುವವನ ಆಟದ ಬಂಡಿ ಎಂಬುದು ಇದರ ಅರ್ಥ. ವೇಶ್ಯೆ ವಸಂತಸೇನೆ ಹಾಗೂ ದಾನಿ ಚಾರುದತ್ತನ ಪರಿಶುದ್ಧ ಪ್ರೇಮವು ಈ ನಾಟಕದ ಮೂಲ ದ್ರವ್ಯ.

About the Author

ಬನ್ನಂಜೆ ಗೋವಿಂದಾಚಾರ್ಯ

 ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಇವರು ಉಡುಪಿ  ಜಿಲ್ಲೆಯ ಅಂಬಲಪಾಡಿಯಲ್ಲಿ  1936 ರಲ್ಲಿ ಜನಿಸಿದರು. ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದಾರೆ. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.  ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಾಣಭಟ್ಟನ ಕಾದಂಬರಿ, ಕಾಳಿದಾಸನ ಶಾಕುಂತಲಾ, ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು. ಅನೇಕ ಸೂಕ್ತ ಮಂತ್ರಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಪುರುಷಸೂಕ್ತ, ಶ್ರೀ ಮದ್ಭಗವದ್ಗೀತೆ, ಶ್ರೀ ಸೂಕ್ತ , ಶಿವಸೂಕ್ತ, ...

READ MORE

Related Books