ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಪ್ರಯೋಗಗಳ ಭಾಗವಾಗಿಯೇ ಈ ಕೃತಿ ‘ನಿಸರ್ಗ ನ್ಯಾಯ’. ಲಿಂಗರಾಜ ವೀ.ರಾಮಾಪೂರ ಲೇಖಕರು. ಮಕ್ಕಳು ಕಲ್ಪನಾ ಲೋಕದಲ್ಲಿ ತೇಲಿದಾಗ ಜ್ಞಾನ ಕಟ್ಟಿಕೊಳ್ಳುವಿಕೆ ಸಾಧ್ಯ ಎಂಬುದು ಅವರ ವಾದ. ಅದಕ್ಕಾಗಿ ಈ ಕೃತಿಯಲ್ಲಿ ಮೂರು ಪರಿಸರದ ನಾಟಕಗಳನ್ನು ನೀಡಿದ್ದಾರೆ. ಈಗಾಗಲೇ ಹತ್ತು ಹಲವು ನಾಟಕಗಳನ್ನು ಮಕ್ಕಳಿಂದ ಆಡಿಸಿ, ನಿರ್ದೇಶಿಸಿ ಅದನ್ನು ಅಕ್ಷರ ರೂಪದಲ್ಲಿ ತಂದಿರುವ ಇವರ ಈ ನಾಟಕಗಳು ಮಕ್ಕಳಿಗೆ ಮಾತ್ರವಲ್ಲ ವಿಜ್ಞಾನಾಸಕ್ತ ಎಲ್ಲರಿಗೂ ಉತ್ತಮ ಶಿಕ್ಷಣವಾಗಿವೆ.
ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ...
READ MORE