ರೇಡಿಯೋ ನಾಟಕಗಳು ಎಂಬ ಪುಸ್ತಕವು ಬೀchi ಅವರ ಕೃತಿಯಾಗಿದೆ. ಅವರ ರೇಡಿಯೊ ನಾಟಕಗಲ ಈ ಸಂಕಲನ 9 ನಾಟಕಗಳನ್ನು ಒಳಗೊಂಡಿದೆ. "ಈ ಪುಸ್ತಕದಲ್ಲಿ ನಾಟಕದ ರೀತಿಯೇ ಬೇರೆ, ಕ್ರಮವೇ ಹೊಸದು. ವಿಧಾನದಲ್ಲಿ ನವೀನತೆ ಇದೆ. ಸಂಭಾಷಣೆಗಳು ಚಿಕ್ಕವಿರಬೇಕು; ಅವುಗಳಲ್ಲಿ ಓಟ ಬೇಕು; ಓದಿದೊಡನೆ ಹಿಡಿತ ಬೇಕು ಕಾಲು ಗಂಟೆಯಲ್ಲಿ.ನಾಟಕವು ಮುಗಿಯಬೇಕು. ವೇಷಕ್ಕೆ ಬಣ್ಣವಿಲ್ಲ. ಬೂದಿ ಇಲ್ಲ. ನಾಟಕವಾಡುವುದು ರೇಡಿಯೋ ನಿಲಯದಲ್ಲಿ, ಕೇಳುವವರು ತಮ್ಮ ತಮ್ಮ ಮನೆಗಳಲ್ಲಿ, ನೂರಾರು ಮೈಲಿಗಳ ಆ ಬದಿ ಮುಂದೆ ಮಾತ್ರ ರೇಡಿಯೋ ಪೆಟ್ಟಿಗೆ ಇದು ಬರೀ ನಾಟಕವಷ್ಟೆ ಅಲ್ಲ, ಕುರುಡನಿಗಾಗಿ ಆಡಿದ ನಾಟಕ, ಸಿನೇಮಾದ ಸಾಮಗ್ರಿಯ ಅನುಕೂಲತೆ ಕೇಳಿದಾಗ ಗುಡುಗು, ಕರೆದಾಗ ಸಿಡಿಲು, ಕುದುರೆಯ ಓಟದ ಸಪ್ಪಳ, ಖಡ್ಗಗಳ ಚಳಪಳ, ರೈಲಿನ ಕೂಗು, ಕಾರಿನ ಹಾರನ್ನು, ಸಹಸ್ರಾರು ಜನ ಸಂದಣಿಯ ಗಜಿಬಿಜಿ, ಮಗನ ಅಳು, ಅಜ್ಜನ ಕೆಮ್ಮು ಎಲ್ಲವೂ ಬೇಕಾದಾಗ ತೆಗೆದುಕೊಳ್ಳಲು ತಯಾರಾಗಿರುತ್ತವೆ" ಎಂದು ಲೇಖಕರು ರೇಡಿಯೊ ನಾಟಕದ ಬಗೆಗಿನ ಹೊಸ ವಿಚಾರಗಳ ಅನಾವರಣ ಮಾಡುತ್ತಾರೆ..
©2024 Book Brahma Private Limited.