‘ಯಾನ ಮತ್ತುಇತರ ನಾಟಕಗಳು’ ಆರ್. ವಿ. ಭಂಡಾರಿ ಅವರ ಕಿರು ನಾಟಕಗಳ ಸಂಗ್ರಹವಾಗಿದೆ. ಪುರಾಣಗಳಲ್ಲಿ ಬರುವ ಕುರುಡು ಕಥೆಗಳು ಈ ನಾಟಕಗಳ ಮೂಲಕ ಎಡಪ೦ಥೀಯ ವೈಚಾರಿಕ ದೃಷ್ಟಿಕೋನಗಳಿಂದ ತೂಗಿ ನೋಡಿದಾಗ ಹೇಗೆ ಮರುಹುಟ್ಟು ಪಡೆದು ಹೊಸ ಮೌಲ್ಯಗಳಿಗೆ ಸ್ಪಂದಿಸುತ್ತವೆಯೆಂದು ಈ ಕೃತಿಯಲ್ಲಿ ತಿಳಿಸಲಾಗಿದೆ.
ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್‌ಚಂದ್ರ ...
READ MOREಹೊಸತು-2002- ಫೆಬ್ರವರಿ
ಈ ದೇಶದ ನೂರಾರು ಅನಿಷ್ಟಗಳನ್ನು ಪಟ್ಟಿ ಮಾಡಿರುವ ಎಂಟು ಕಿರುನಾಟಕಗಳ ಸಂಗ್ರಹ, ಮಾನವತೆಯನ್ನು ಮೆಟ್ಟಿನಿಂತ ಕೋಮುವಾದಿಗಳು, ಬಡಜನೋದ್ಧಾರ ಮಾಡುವ ಗೋಮುಖ ವ್ಯಾಘ್ರಗಳು ಲೇಖಕರ ಬರಹದ ಹೊಡೆತಕ್ಕೆ ಸಿಕ್ಕಿ ಒದ್ದಾಡುತ್ತಾರೆ. ಪುರಾಣಗಳಲ್ಲಿ ಬರುವ ಕುರುಡು ಕಥೆಗಳು ಈ ನಾಟಕಗಳ ಮೂಲಕ ಎಡಪಂಥೀಯ ವೈಚಾರಿಕ ದೃಷ್ಟಿಕೋನಗಳಿಂದ ತೂಗಿ ನೋಡಿದಾಗ ಹೇಗೆ ಮರುಹುಟ್ಟು ಪಡೆದು ಹೊಸ ಮೌಲ್ಯಗಳಿಗೆ ಸ್ಪಂದಿಸುತ್ತವೆಯೆಂದು ಇಲ್ಲಿ ಓದಿ ನೋಡಿ !