‘ದೆವ್ವನ ಮನೆ’ ಬೇಂದ್ರೆಯವ ಆರನೆಯ ನಾಟಕ. 1936ರಲ್ಲಿ ರಚಿಸಲಾದ ಈ ನಾಟಕವು 40 ಪುಟಗಳಲ್ಲಿದೆ. ಇದೊಂದು ಧ್ವನಿಚಿತ್ರ . ನಾಟಕದ ಉದ್ದೇಶವನ್ನು ನಾಂದಿ ಪದ್ಯದಲ್ಲಿಯೇ ತಿಳಿಸಲಾಗಿದೆ. 12 ಪಾತ್ರಗಳಿರುವ ’ದೆವ್ವದ ಮನೆ’ ನಾಟಕವು ವಿಮರ್ಶಕರ ಗಮನ ಸೆಳೆದಿದೆ. ಡಿ.ಮಂಗಳಾ ಪ್ರಿಯದರ್ಶಿನಿ ಅವರು ’ಮನೆಯ ಸಮಸ್ಯಗಳನ್ನು ಬಗೆಹರಿಸುವುದು ಕಷ್ಟ ಸಾಧ್ಯವಿರುವ ಸಂದರ್ಭದಲ್ಲಿ, ದೇಶದ ಸಮಸ್ಯಗಳಿಗೆ ಪರಿಹಾರ ದೊರಕಿಸುವುದು ಸುಲಭದ ವಿಚಾರವಲ್ಲ ಎಂದು ಧ್ವನಿಸುವುದೇ ನಾಟಕಗಾರನ ಉದ್ದೇಶವಾಗಿದೆ ’ ಎಂದು ವಿವರಿಸಿದ್ದಾರೆ.
©2024 Book Brahma Private Limited.