ಬೊಂಬಾಟ ಬೀchi- ಎಂಬುದು ಬೇಲೂರು ರಾಮಮೂರ್ತಿ ಅವರು ಬರೆದ ಹಾಸ್ಯ ನಾಟಕ. ಬೀchi ಅವರು ಸಹ ಕನ್ನಡ ಸಾಹಿತ್ಯದ ಹಾಸ್ಯ ಬ್ರಹ್ಮ ಎಂದೇ ಖ್ಯಾತಿ. ಅವರ ವ್ಯಕ್ತಿತ್ವದ ಹತ್ತು ಹಲವು ಎತ್ತರಗಳನ್ನು ಹಾಸ್ಯದ ಮೂಲಕವೇ ತೋರಿಸುವ ವಿಷಯ ವಸ್ತುವಿನ ಇ;ಲ್ಲಿಯ ನಾಟಕವು, ಓದುಗರನ್ನು ತನ್ನ ನಿರೂಪಣಾ ಶೈಲಿಯಲ್ಲಿ, ಆಕರ್ಷಕ ಸಂಭಾಷಣೆ ಹಾಗೂ ಸರಳವಾದ ಭಾಷೆಯೊಂದಿಗೆ ಗಮನ ಸೆಳೆಯುತ್ತದೆ.
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...
READ MORE