‘ಸಬರದ ನಾಟಕಗಳು’ ಕೃತಿಯಲ್ಲಿ ಲೇಖಕ ಬಸವರಾಜ ಸಬರದ ಅವರ ಏಳು ನಾಟಕಗಳು ಸಂಕಲನಗೊಂಡಿವೆ. 1977ರಿಂದ 2005ರ ವರೆಗೆ ಸಬರದ ಅವರು ಬರೆದ ಹದಿನೇಳು ನಾಟಕಗಳು ಪ್ರಕಟವಾಗಿದ್ದವು. ಅವುಗಳಲ್ಲಿ ಏಳು ಪ್ರಮುಖ ನಾಟಕಗಳ ಈ ಕೃತಿಯಲ್ಲಿ ಸಂಕಲನಗೊಂಡಿವೆ. ಈ ಏಳು ನಾಟಕಗಳು ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಕಟವಾಗಿರುವ ಕೃತಿಗಳಾಗಿವೆ. ಇವುಗಳಲ್ಲಿ ಮೂರು ಪೂರ್ಣಾವಧಿ ನಾಟಕಗಳು ಹಾಗೂ ನಾಲ್ಕು ಬೀದಿ ನಾಟಕಗಳು ಸೇರಿಕೊಂಡಿವೆ. ರೆಕ್ಕೆ ಮೂಡಿದಾಗ ಸಾಮಾಜಿಕ ನಾಟಕವಾದರೆ ನರಬಲಿ ಜಾನಪದ ಶೈಲಿಯ ನಾಟಕವಾಗಿದೆ. ಬೆಳ್ಳಕ್ಕಿ ಸಾಲು ಗೀತನಾಟಕವಾಗಿದೆ. ನಾಟಕ ಕ್ಷೇತ್ರಕ್ಕೆ ಸೇರಿದ ವಿವಿಧ ಪ್ರಕಾರಗಳ ನಾಟಕಗಳು ಒಟ್ಟಿಗೇ ಇಲ್ಲಿ ಓದುಗರಿಗೆ ಸಿಗುತ್ತವೆ. ಮೂರು ದಶಕಗಳ ಹಿಂದೆ ಪ್ರಕಟವಾದ ಆ ನಾಟಕಗಳ ಪ್ರತಿಗಳೂ ಈಗ ಲಭ್ಯವಿಲ್ಲ. ಹೀಗಾಗಿ ಈ ಕೃತಿ ಬಸವರಾಜ ಸಬರದ ನಾಟಕ ಕ್ಷೇತ್ರದ ಕೊಡುಗೆಯನ್ನು ಕಟ್ಟಿಕೊಡುವಲ್ಲಿ ಸಹಾಯಕವಾಗಿದೆ.
©2024 Book Brahma Private Limited.