ಮಹಾಭಾರತದ ಕಥಾ ವಸ್ತುವನ್ನು ಆಧಾರಿಸಿ ಬರೆದಂತಹ ನಾಟಕ ಶ್ಮಶಾನ ಕುರುಕ್ಷೇತ್ರಂ. ಈ ನಾಟಕದಲ್ಲಿ 10 ದೃಷ್ಯಗಳಿದ್ದು ಇವು ಯುದ್ಧದ ಭಿಕರತೆಯನ್ನು ಓದುಗರಿಗೆ ತಿಳಿಯಪಡಿಸುತ್ತವೆ. 1931ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಈ ಪುಸ್ತಕ, ಇಲ್ಲಿಯವರೆಗೆ ಆರಕ್ಕೂ ಹೆಚ್ಚಿನ ಮುದ್ರಣಗಳನ್ನು ಕಂಡಿದೆ. ಕುವೆಂಪು ಅವರು ಈ ಪುಸ್ತಕದಲ್ಲಿ ಯುದ್ಧದಿಂದಾಗುವ ಪರಿಣಾಮಗಳ ಕುರಿತು ವಿವರಿಸಿದ್ದಾರೆ. ಕೃಷ್ಣ, ಪಾಂಡವರು, ಕೌರವರು ಮತ್ತು ಅವರ ಸುತ್ತಮುತ್ತಲಿನವರ ನಡುವೆ ನಡೆಯುವಂತಹ ಸನ್ನಿವೇಷಗಳನ್ನು ವಿವರಿಸಿ, ಕುರುಕ್ಷೇತ್ರ ಯುದ್ಧದಲ್ಲಿ ಈ ಪಾತ್ರಗಳು ಯಾವ ರೀತಿ ಪಾತ್ರ ವಹಿಸುತ್ತವೆ ಮತ್ತು ಯುದ್ದದ ನಂತರ ಆ ಪಾತ್ರಗಳು ಅನುಭವಿಸುವ ವೇದನೆಯನ್ನು ಈ ನಾಟಕ ವಿವರಿಸುತ್ತದೆ. ಯುದ್ದದಲ್ಲಿ ನಡೆಯುವ ಕ್ರೌರ್ಯ, ಅನ್ಯಾಯ, ವಿನಾಶ, ಅವಿವೇಕ, ವಿಧಿ, ವಿಫಲತೆ, ಹತಾಶೆ, ಸಾವು ನೋವುಗಳನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಕುವೆಂಪು ಅವರು ವಿವರಿಸಿದ್ದಾರೆ. ಯುದ್ದದ ನಂತರ ಅನ್ಯಾಯವೆಲ್ಲಾ ತೊಲಗಿ ನ್ಯಾಯದ ಪ್ರತಿಷ್ಟಾಪನೆಯಾಗುತ್ತದೆಂದು ಭಾವಿಸುತ್ತೇವೆ ಆದರೆ ಅಲ್ಲಿ ಮತ್ತೆ ಸಾಮಾನ್ಯರ ಆಹುತಿ ಪ್ರಾರಂಭವಾಗುತ್ತದೆಯೆಂಬ ಮಾರ್ಮಿಕವಾದ ಸಂದೇಶವನ್ನು ಕುವೆಂಪು ಅವರು ಈ ನಾಟಕದ ಮೂಲಕ ಸಾರಿದ್ದಾರೆ.
©2024 Book Brahma Private Limited.