ಟೊಳ್ಳುಗಟ್ಟಿ ಅಥ್ವಾ ಮಕ್ಕಳಿಸ್ಕೂಲ್ ಮನೇನಲ್ವೇ?-ಈ ನಾಟಕದ ಕರ್ತೃ-ಗುಂಡೂ (ಟಿ.ಪಿ.ಕೈಲಾಸಂ). ಮಧ್ಯಮ ವರ್ಗದ ಆಡುನುಡಿಯನ್ನು ಯಥಾವತ್ತಾಗಿ ಬಿಂಬಿಸಿದ್ದಲ್ಲದೇ, ಮಧ್ಯಮ ವರ್ಗದ ಜನರ ಆಸಕ್ತಿಯನ್ನು ಸಂಪೂರ್ಣವಾಗಿ ದೃಶ್ಯ ಕಾವ್ಯವಾಗಿ ತೋರಿದ್ದಕನ್ನಡದ ಮೊದಲ ನಾಟಕ.
ನಾಟಕದ ವಿವಿಧ ಪಾತ್ರಗಳ ಮೂಲಕ ಮಾನವನ ಸಹಜ ವ್ಯಕ್ತಿತ್ವದ ಗುಣಗಳನ್ನು ತೋರುತ್ತದೆ. ನಾಟಕದಲ್ಲಿ ತೋರಿದಂತೆ ಪುಟ್ಟ ಪಾತ್ರವು ಟೊಳ್ಳಾಗಿದೆ, ಮಾಧು ಪಾತ್ರವು ಗಟ್ಟಿಯಾಗಿದೆ ಮತ್ತು ಹಿರಣ್ಯಯ್ಯ ಪಾತ್ರ ಟೊಳ್ಳುಗಟ್ಟಿಯಾಗಿದೆ . ಮಕ್ಕಳ ಮೊದಲ ಶಾಲೆಯೇ ಮನೆ ಎಂಬುದನ್ನು ತೋರಿದ್ದು ಉತ್ತಮ ವಸ್ತುವೂ ಹೌದು ಮತ್ತು ಈ ನಾಟಕದ ಹೆಗ್ಗಳಿಕೆಯೂ ಹೌದು.ನೈಜ ಶಿಕ್ಷಣದ ಮಾದರಿಯೊಂದನ್ನು ಈ ನಾಟಕ ಕಟ್ಟಿಕೊಡುತ್ತದೆ.
1920ರಲ್ಲಿ ಬರೆದ ಈ ನಾಟಕ ಆಧರಿಸಿ, ಇಂದಿನ ಪರಿಕಲ್ವಪನೆಗೆ ಒಗ್ಗಿಸಿ, ಗುರುದತ್ ಅವರು ಕನ್ನಡದ ಚಲನಚಿತ್ರ -‘ಮೂಕವಿಸ್ಮಿತ’ ನಿರ್ದೇಶಿಸಿದ್ದಾರೆ.
©2025 Book Brahma Private Limited.