ವೈಚಾರಿಕ ನಾಟಕಗಳು

Author : ವೆಂಕಟಯ್ಯ ಅಪ್ಪಗೆರೆ

Pages 72

₹ 45.00




Year of Publication: 2012
Published by: ಕಣ್ವ ಪ್ರಕಾಶನ
Address: ಬೆಂಗಳೂರು

Synopsys

‘ವೈಚಾರಿಕ ನಾಟಕಗಳು’ ಕೃತಿಯು ವೆಂಕಟಯ್ಯ ಅಪ್ಪಗೆರೆ ಅವರ ಏಕಾಂಕ, ಕಿರುನಾಟಕ ಕೃತಿಯಾಗಿದೆ. ಇಬ್ಬರು ಪರಸ್ಪರ ಮಾತನಾಡುತ್ತಿರುವಂತೆ ದೃಶ್ಯ ಸಂಯೋಜಿಸಿ ಜೊತೆಯಲ್ಲಿ ಮೌಡ್ಯವನ್ನು ಹೊಂದಿರುವ ವ್ಯಕ್ತಿಯ ಮನಸ್ಸಿನಿಂದ ಅದನ್ನು ತೊಡೆದುಹಾಕುವ ಪ್ರಯತ್ನ ಮಾಡಲಾಗಿದೆ. ಮೂಢಾಚರಣೆಯಲ್ಲಿ ತೊಡಗಿದ ವ್ಯಕ್ತಿ ಅದನ್ನು ಪರಂಪರಾಗತ ನಂಬಿಕೆಯಂತೆ ಅನುಸರಿಸು ತಿರುವುದರಿಂದ ಮತ್ತು ಮುಂದೆಯೂ ಅವನನ್ನು ಅನುಸರಿಸಿ ಇತರರು ಹಾಗೆ ಮಾಡುವುದರಿಂದ ಸಮಾಜದಲ್ಲಿದ್ದು ಉಳಿದುಕೊಂಡಿವೆ. 

ವೈಜ್ಞಾನಿಕ-ವೈಚಾರಿಕ ಮನೋಭಾವ ಬೆಳೆಸಿದಲ್ಲಿ ಬೇರುಸಹಿತ ಕೀಳಬಹುದಲ್ಲವೇ ? ಇಂಥ ವೈಜ್ಞಾನಿಕ ಯುಗದಲ್ಲೂ ಅಂಧಾನುಕರಣೆ ಸರಿಯೇ ? ಇವೆಲ್ಲ ಪ್ರಶ್ನೆಗಳು ಲೇಖಕರನ್ನು ಕಾಡಿದ್ದರಿಂದ ಇಲ್ಲಿನ ನಾಟಕಗಳು ರಚನೆಯಾಗಿವೆ. ಮುಖ್ಯವಾಗಿ ಎಳವೆಯಲ್ಲಿ ವಿದ್ಯಾರ್ಥಿಗಳಲ್ಲಿ ಇಂಥವು ಬೆಳೆಯಬೇಕೆಂಬ ಉದ್ದೇಶ ಶ್ರೀ ವೆಂಕಟಯ್ಯ ಅಪ್ಪಗೆರೆಯವರದ್ದು ಹಾಗಾಗಿ ದೈನಂದಿನ ವ್ಯವಹಾರಗಳ ಪರಿಧಿಯಲ್ಲಿಯೇ ಸಂಯೋಜಿಸಲಾಗಿದ್ದು ಎಲ್ಲರೂ ವಿಚಾರವಂತರಾಗಬೇಕು ಎಂಬ ಕಳಕಳಿ ಈ ಕೃತಿಯಲ್ಲಿದೆ. 

About the Author

ವೆಂಕಟಯ್ಯ ಅಪ್ಪಗೆರೆ

ಬರಹಗಾರರಾದ ಡಾ. ವೆಂಕಟಯ್ಯ ಅಪ್ಪಗೆರೆ ಅವರು ಬಿಎಸ್ಸಿ, ಎಂಎಸ್ಸಿ ಪದವಿ ಪಡೆದಿದ್ದಾರೆ. ‘ಗ್ರಾಮೀಣ ಮಹಿಳಾಭಿವೃದ್ಧಿಯಲ್ಲಿ ಸ್ವಸಹಾಯ ಗುಂಪುಗಳ ಪಾತ್ರ’  ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಗೌರವ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ. ಅಕೌಂಟೆಂಟ್‌ ಜನರೆಲ್‌ ಕಚೇರಿಯಲ್ಲಿ ಆಡಿಟರ್‌ ಆಗಿ ವರತ್ತಿ ಆರಂಭಿಸಿ, ಗ್ರಾಮೀಣ ಬ್ಯಾಂಕ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.  ಕುವೆಂಪು, ಬುದ್ಧ, ಲೋಹಿಯಾ ಅವರ ವಿಚಾರಗಳಿಂದ ಸ್ಪೂರ್ತಿ ಪಡೆದಿದ್ದ ಇವರು ಸಾಹಿತ್ಯ ರಚನೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಸಾಮಾನ್ಯ ಘಟನೆಗಳ ವೈಜ್ಞಾನಿಕ ವಿಶ್ಲೇಷಣೆ, ಅಂಬೇಡ್ಕರ್‌ ಅಮರವಾಣಿಗಳು, ವೇದ ವಿಜ್ಞಾನ, ಸ್ವಸಹಾಯ ಗುಂಪುಗಳ ದಸ್ತಾವೇಜು ಮತ್ತು ಲೆಕ್ಕಪತ್ರಗಳು, ವೈಜ್ಞಾನಿಕ ವಿಶೇಷತೆಗಳು, ವೈಚಾರಿಕ ಚಿಂತನೆಗಳು, ಪ್ರವಾಸಿ ...

READ MORE

Reviews

(ಹೊಸತು, ಮೇ 2012, ಪುಸ್ತಕದ ಪರಿಚಯ)

ಇವು ಜನರಲ್ಲಿ ವೈಚಾರಿಕ ದೃಷ್ಟಿಯನ್ನು ಬೆಳೆಸುವ ಉದ್ದೇಶದಿಂದ ರಚಿತವಾದ ಕಿರುನಾಟಕಗಳು. ಇಬ್ಬರು ಪರಸ್ಪರ ಮಾತನಾಡುತ್ತಿರುವಂತೆ ದೃಶ್ಯ ಸಂಯೋಜಿಸಿ ಜೊತೆಯಲ್ಲಿ ಮೌಡ್ಯವನ್ನು ಹೊಂದಿರುವ ವ್ಯಕ್ತಿಯ ಮನಸ್ಸಿನಿಂದ ಅದನ್ನು ತೊಡೆದುಹಾಕುವ ಪ್ರಯತ್ನ ಮಾಡಲಾಗಿದೆ. ಮೂಢಾಚರಣೆಯಲ್ಲಿ ತೊಡಗಿದ ವ್ಯಕ್ತಿ ಅದನ್ನು ಪರಂಪರಾಗತ ನಂಬಿಕೆಯಂತೆ ಅನುಸರಿಸು ತಿರುವುದರಿಂದ ಮತ್ತು ಮುಂದೆಯೂ ಅವನನ್ನು ಅನುಸರಿಸಿ ಇತರರು ಹಾಗೆ ಮಾಡುವುದರಿಂದ ಸಮಾಜದಲ್ಲಿದ್ದು ಉಳಿದುಕೊಂಡಿವೆ. ಮೂಢನಂಬಿಕೆಗಳನ್ನು ಲಾಗಾಯ್ತಿನಿಂದಲೂ ಕಾಪಾಡಿಕೊಂಡು ಬಂದ ಜನ ಸದಾಚಾರದ ಸದ್ವರ್ತನೆಗಳನ್ನು ಪಾಲಿಸಿಕೊಂಡು ಬರುವುದಿಲ್ಲವೇಕೆ ? ತಿಳಿದೋ ತಿಳಿಯದೆಯೋ ಜನರಲ್ಲಿ ಮನೆಮಾಡಿರುವ ಇಂಥ ಅಂಧಾನುಕರಣೆಯನ್ನು ಸರಿಯಾದ ತಿಳುವಳಿಕೆ ಕೊಟ್ಟಲ್ಲಿ, ವೈಜ್ಞಾನಿಕ-ವೈಚಾರಿಕ ಮನೋಭಾವ ಬೆಳೆಸಿದಲ್ಲಿ ಬೇರುಸಹಿತ ಕೀಳಬಹುದಲ್ಲವೇ ? ಇಂಥ ವೈಜ್ಞಾನಿಕ ಯುಗದಲ್ಲೂ ಅಂಧಾನುಕರಣೆ ಸರಿಯೇ ? ಇವೆಲ್ಲ ಪ್ರಶ್ನೆಗಳು ಲೇಖಕರನ್ನು ಕಾಡಿದ್ದರಿಂದ ಇಲ್ಲಿನ ನಾಟಕಗಳು ರಚನೆಯಾಗಿವೆ. ಮುಖ್ಯವಾಗಿ ಎಳವೆಯಲ್ಲಿ ವಿದ್ಯಾರ್ಥಿಗಳಲ್ಲಿ ಇಂಥವು ಬೆಳೆಯಬೇಕೆಂಬ ಉದ್ದೇಶ ಶ್ರೀ ವೆಂಕಟಯ್ಯ ಅಪ್ಪಗೆರೆ ಯವರದ್ದು ಹಾಗಾಗಿ ದೈನಂದಿನ ವ್ಯವಹಾರಗಳ ಪರಿಧಿಯಲ್ಲಿಯೇ ಸಂಯೋಜಿಸಲಾಗಿದ್ದು ಎಲ್ಲರೂ ವಿಚಾರವಂತರಾಗಬೇಕು ಎಂಬ ಕಳಕಳಿ ಇಲ್ಲಿದೆ.

– ಇಂದಿರಾಕುಮಾರಿ

 
 

Related Books