ಜೇನ್ಸ್ ಬ್ಯಾರಿಯ ಪ್ರಸಿದ್ಧ ಇಂಗ್ಲಿಷ್ ನಾಟಕಗಳ ಈ ಕನ್ನಡಾನುವಾದ 20ನೇ ಶತಮಾನದ ಆರಂಭಿಕ ಕಾಲಘಟ್ಟವನ್ನು ಓದುಗರ ಮುಂದೆ ತರುತ್ತದೆ. ಒಂದು ಮಕ್ಕಳ ನಾಟಕವೂ ಈ ಕೃತಿಯಲ್ಲಿದ್ದು ಕನ್ನಡದ ನೆಲದ ಗುಣಕ್ಕೆ ಹೊಂದುವಂತೆ ಅನುವಾದ ಕಾರ್‍ಯ ಸೊಗಸಾಗಿ ನಡೆದಿದೆ. ಸಮಾಜವಾದ ಸಾಮಾನ್ಯ ಮನುಷ್ಯನ ಬದುಕಿನಲ್ಲಿ ಹೇಗೆಲ್ಲಾ ವರ್ತಿಸುತ್ತದೆ ಎಂಬುದನ್ನೂ ಕೃತಿಯ ಮೂಲಕ ಅರಿಯಬಹುದು.
ಖ್ಯಾತ ವಿಮರ್ಶಕ ಡಾ. ಸಿ.ಎನ್ ರಾಮಚಂದ್ರನ್ ಕೃತಿಯ ಬಗ್ಗೆ ಒಂದೆಡೆ ಹೀಗೆ ಹೇಳಿದ್ದಾರೆ: ನಾಂದಿ’ ಮತ್ತು ವಿಷ್ಕಂಭಕ’ಗಳಿಗೆ ಹತ್ತಿರವಿರುವ ದೃಶ್ಯಗಳ ಮೂಲಕ ಕಥೆಯನ್ನು ಮುಂದುವರಿಸುವುದು ಸುಲಭವಾಗುವಂತೆಯೇ ತಿಳಿಹಾಸ್ಯವನ್ನು ರಂಗದ ಮೇಲೆ ತರಲು ಲೇಖಕರಿಗೆ ಸಾಧ್ಯವಾಗಿದೆ. ಹಾಗೆಯೇ ಅಲ್ಲಲ್ಲಿ ಬರುವ ಒಂದೆರಡು ಹಾಡುಗಳು ನಾಟಕವನ್ನು ಮತ್ತಷ್ಟು ರಂಜನೀಯವಾಗಿಸುತ್ತವೆ. ಒಂದು ಪ್ರಸಿದ್ಧ ಇಂಗ್ಲಿಷ್ ನಾಟಕವನ್ನು ಯಶಸ್ವಿಯಾಗಿ ಕನ್ನಡಕ್ಕೆ ರೂಪಾಂತರಿಸಿರುವ ಲಕ್ಷ್ಮಣರಾವ್ ಕನ್ನಡ ಪ್ರೇಕ್ಷಕರ ಹಾಗೂ ಓದುಗರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.’
©2024 Book Brahma Private Limited.