ಲೇಖಕ ಸತ್ಯನಾರಾಯಣರಾವ್ ಅಣತಿ ಅವರ ಮಕ್ಕಳ ನಾಟಕ, ‘ಕೊಳಲ ನ್ಯಾಯ’. ಮಕ್ಕಳೀಗಾಗಿ ಲೇಖಕರು ಬರೆದ ಎರಡನೇ ನಾಟಕ ಕೃತಿ ಇದು. ಈ ಕೃತಿ ಕುರಿತು ಸ್ವತಃ ಲೇಖಕರು ‘ ನೋಬೆಲ್ ಪ್ರಶಸ್ತಿ ಪುರಸ್ಕೃತ ಡಾ. ಅಮರ್ತ್ಯಸೇನ್ ಅವರು ಒಂದು ಭಾಷಣದಲ್ಲಿ ಹೇಳಿದ ಕತೆಯೇ 'ಕೊಳಲ ನ್ಯಾಯ' : ಕೊಳಲು, ಮೂವರು ಮಕ್ಕಳಲ್ಲಿ ಯಾರಿಗೆ ಸೇರಬೇಕು? ತಯಾರು ಮಾಡಿದವರು, ನುಡಿಸಲು ಬರುವವನಿಗೆ, ಇಂಥ ಯಾವ ವಸ್ತುಗಳು ಇಲ್ಲದವಳು. ಯಾರಿಗೆ? ಈ ಪ್ರಶ್ನೆಗೆ ಉತ್ತರ ಹುಡುಕುವುದೇ ಇಂದಿನ ನಮ್ಮ ದೇಶದ ಅರ್ಥ ವಿತರಣೆಯ ಸಮಸ್ಯೆ ಎಂಬುದಾಗಿ ಸೂಚಿಸುವ ಕಥೆ ನನ್ನ ಮನಸ್ಸಿನಲ್ಲಿ ಇಳಿಯುತ್ತಾ ಹೋಯಿತು. ಪರಿಭಾವಿಸುತ್ತಾ ಹೋದಂತೆ ಈ ರೂಪ ತಳೆಯಿತು.’ ಎಂದು ಹೇಳಿದ್ದಾರೆ.
ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ. ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ...
READ MORE