‘ನಾಕು ಬೀದಿನಾಟಕಗಳು’ ಲೇಖಕ ಡಾ. ಬಸವರಾಜ ಸಬರದ ಅವರ ನಾಲ್ಕು ನಾಟಕಗಳ ಸಂಕಲನ. ಈ ಸಂಕಲನಕ್ಕೆ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ ಈವರೆಗೆ ಪ್ರಕಟವಾದ ತಮ್ಮ ಎಲ್ಲ ನಾಟಕಗಳಲ್ಲಿ ಕಾವ್ಯಾಭಿವ್ಯಕ್ತಿ ಮತ್ತು ವೈಚಾರಿಕ ನಿಲುವುಗಳನ್ನು ಸ್ಪಷ್ಟಗೊಳಿಸುತ್ತ ಬಂದಿರುವ ಸಬರದ ಈಗಿನ ನಾಕು ಬೀದಿ ನಾಟಕಗಳು ಒಂದು ಮಹತ್ವದ ಕೃತಿಯಾಗಿದೆ. ಎಲ್ಲಾ ಬಗೆಯ ಶೋಷಣೆಯ ವಿರುದ್ಧ ಎತ್ತರದ ಧ್ವನಿಯಲ್ಲಿ ನುಡಿಯುತ್ತಿರುವ ಸಬರದ ಹುಲಿಗೆಮ್ಮ, ಕಂಪ್ಯೂಟರ್ ಯುಗದ ಒಬ್ಬ ಅಸಾಧಾರಣ ಶಕ್ತಿದೇವತೆ, ಎಲೆ ಮರೆಯ ಹೂಗಳು, ಇಂದಿನ ಸಮಾಜಕ್ಕೆ ಅಗತ್ಯವಿರುವ ಹೊಸ ಶಿಕ್ಷಣ ಪದ್ಧತಿಯ ಅಗತ್ಯವನ್ನು ಹೇಳುತ್ತದೆ. ರಾಮನ ಸಿಂಹ ಆಸನದಲ್ಲಿ ನಾಯಕ ಹನುಮ, ಹನುಮ ನಾಯಕನ ಪದತಲದಲ್ಲಿ ರಾಮರಾಯ ನಿಲ್ಲಬೇಕಾಗಿ ಬಂದ ಪರಿಸ್ಥಿತಿಯ ವರ್ಣನೆ ಹನುಮನಾಯಕ ನಮ್ಮ ಸಮಾಜದ ಭ್ರಷ್ಟ ವ್ಯವಸ್ಥೆಯ ತಾತ್ಸಾರಕ್ಕೆ ತುತ್ತಾದ ರೈತರು ಸಾಲದ ಹೆಣವಾಗುವ ದುರಂತದ ಕಣ್ಣಿಗೆ ಕಟ್ಟುವ ಚಿತ್ರಣ ಕೊನೆಯ ನಾಟಕ. ಡಾ. ಸಬರದರ ಈ ನಾಲ್ಕೂ ಬೀದಿನಾಟಕಗಳ ಅಂತರ್ ದ್ರವ್ಯ ಹಾಗೂ ನಿರೂಪಣೆಯಲ್ಲಿ ಬಳಕೆಯಾದ ಭಾಷೆ, ಶೈಲಿ, ವಿಧಾನಗಳು ಅಲ್ಪ ಬದಲಾವಣೆಯೊಂದಿಗೆ ರಂಗದ ಮೇಲೆಯೂ ಪ್ರದರ್ಶನಗೊಳ್ಳುವಂತಿರುವುದು ಅಭಿನಂದನಾರ್ಹ ಗುಣ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.