‘ನಾವೂ ನೀವೂ ಫ್ರೆಂಡ್ಸ್ ಅಲ್ವಾ ?!’ ಕಿಶೋರ ಸಾಹಿತಿ ಅಂತಃಕರಣನ ನಾಟಕ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ನಡೆಸಿದ ನಾಟಕೋತ್ಸವಕ್ಕೆ ಆಯ್ಕೆಯಾಗಿ 10 ಪ್ರದರ್ಶನಗಳನ್ನು ಕಂಡಿದೆ.
ಮಕ್ಕಳನ್ನು ಕೇಂದ್ರವಾಗಿಸಿಕೊಂಡು ಮುಗ್ಧತೆಯ ಪರಿಧಿಯೊಳಗೆ ಕಟ್ಟಲ್ಪಟ್ಟ ಶಾಂತಿಯ ಆಶಯಾಭಿವ್ಯಕ್ತಿಯ ನವಿರುತನವಿದೆ. ನಾಟಕವು ಹುಸಿ ಬೌದ್ಧಿಕತೆಯನ್ನಾಗಲಿ, ಒಣ ಸೈದ್ಧಾಂತಿಕ ತರ್ಕವನ್ನಾಗಲಿ, ಶುಷ್ಕ ದಾರ್ಶನಿಕ ನಿರೂಪಣೆಗಳನ್ನಾಗಲಿ ಮುಂದಿಡದೇ ಲವಲವಿಕೆಯಿಂದ ಕೂಡಿದ ಮುಗ್ಧ ಪ್ರೇಮದ ಕಡೆಗಿನ ಒಲವನ್ನು ಸ್ಥಾಪಿಸುವ ಪ್ರಯತ್ನಕ್ಕೆ ಚಾಲನೆ ನೀಡಿದೆ.
ಕಲ್ಪಿತ ವಾಸ್ತವಗಳ ನಡುವೆ ವಾಸ್ತವವನ್ನು ಜೀವಂತವಾಗಿಡುವ ಸಾಹಿತ್ಯಕ ಚಾಕಚಕ್ಯತೆ, ಸೃಜನಶೀಲತೆ, ಕಲಾ ನಿರ್ವಹಣೆಯು ಅಂತಃಕರಣನೆಂಬ ನಾಟಕಕಾರನಿಗೆ ಪರಿಪೂರ್ಣವಾಗಿ ಈ ನಾಟಕದ ರಚನೆಯಲ್ಲಿ ದಕ್ಕಿದೆ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE