ಲೇಖಕಿ ಎಸ್. ಮಾಲತಿ ಅವರು ಹಲವು ವರ್ಷಗಳಿಂದಲೂ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಉತ್ತಮ ನಾಟಕಗಳನ್ನು ರಚಿಸಿ - ನಿರ್ದೇಶಿಸಿದ್ದಾರೆ. ನೊಬೆಲ್ ಪುರಸ್ಕೃತ ಕೃತಿ ಗೀತಾಂಜಲಿಯನ್ನು ನೃತ್ಯರೂಪಕದ ಮೂಲಕ ರಂಗದ ಮೇಲೆ ಪ್ರದರ್ಶಿಸುವ ಒಂದು ಪ್ರಯತ್ನದ ಭಾಗವಾಗಿ ಮೂಡಿ ಬಂದ ಸಣ್ಣ ಕೃತಿಯೇ ‘ಗೀತಾಂಜಲಿ’.
ರಂಗಕರ್ಮಿ, ಬರಹಗಾರ್ತಿ ಎಸ್. ಮಾಲತಿ ಅವರು ಜನಿಸಿದ್ದು 1952 ಮೇ 1ರಂದು ಶಿವಮೊಗ್ಗದಲ್ಲಿ. ತಾಯಿ ಉಮಾ ಶೇಷಗಿರಿ ಪೈ, ತಂದೆ ಶೇಷಗಿರಿ ಪೈ. ದೆಹಲಿಯ ಎನ್.ಎಸ್.ಡಿ ಗರಡಿಯಲ್ಲಿ ಬೆಳೆದುಬಂದವರು. ಇವರು ಬರೆದ ನಾಟಕಗಳೆಂದರೆ ಎರಡು ಕಿರು ನಾಟಕಗಳು, ಶೀಮ ಕಥಾನಕ, ದಲಿತಲೋಕ. ಇವರು ಅನುವಾದಿಸಿದ ನಾಟಕಗಳು ಜನತೆಯ ಶತ್ರು, ರೊಷೊಮನ್, ಒಂದು ಪಯಣದ ಕಥೆ, ಹೊಸದಿಕ್ಕು. ಇವರ ಬರಹಗಳು ನಾಟಕಕ್ಕೆ ಮಾತ್ರ ಸೀಮಿತವಾಗಿರದೇ ಕಾವ್ಯದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕ್ಷಣಿಕವಲ್ಲದ ಕ್ಷಣಗಳು, ಹೇಳಬೇಕೆನಿಸಿದ್ದು, ನನ್ನ ಪ್ರಿಯತಮನ ಬಾಳು, ಭಾವಕೋಶ ಇವರ ಪ್ರಮುಖ ಕವನ ಸಂಕಲನಗಳು. ಸುಮಾರು 42ಕ್ಕೂ ...
READ MORE