1947ರಲ್ಲಿ ಮೊದಲ ಮುದ್ರಣವನ್ನು ಕಂಡಂತಹ ನಾಟಕ ಬೆರಳ್‍ಗೆ ಕೊರಳ್. ಈ ನಾಟಕದಲ್ಲಿ ಗುರು, ಕರ್ಮ ಮತ್ತು ಯಜ್ಞ ಎಂಬ ಮೂರು ದೃಷ್ಯಗಳಿವೆ. ನಾಟಕದ ಎರಡನೇ ಮುದ್ರಣದಿಂದ ಕೊನೆಯಲ್ಲಿ ದೇ. ಜವರೇಗೌಡ ಅವರ ಟಿಪ್ಪಣಿಯನ್ನು ಕಾಣಬಹುದು. ಏಕಲವ್ಯನ ಕಥೆಯನ್ನು ಆಧಾರಿಸಿ ಬರೆದಂತಹ ನಾಟಕವಿದು. ಏಕಲವ್ಯ, ಅಬ್ಬೆ, ಅಶ್ವತ್ಥಾಮ ಹಾಗೂ ದ್ರೋಣಾಚಾರ್ಯರ ಪಾತ್ರಗಳನ್ನು ಹೊಂದಿರುವಂತಹ ಈ ನಾಟಕದ ನಿರೂಪಣೆಯು, ಮಹಾಭಾರತದಲ್ಲಿ ಕಾಣಲು ಸಿಗುವ ಏಕಲವ್ಯನ ಕಥಾನಕವನ್ನು ವಿವರಿಸುತ್ತದೆ. ಬಿಲ್ವಿದ್ಯೆಯಲ್ಲಿ ದ್ರೋಣಾಚಾರ್ಯರನ್ನು ಗುರುವಾಗಿ ಸ್ವೀಕರಿಸಿದ ಏಕಲವ್ಯ, ಶಬ್ದವೇದಿ ವಿದ್ಯೆಯಲ್ಲಿ ಕೂಡ ಪ್ರಾವೀಣ್ಯವನ್ನು ಪಡೆದ ಸಂದರ್ಭದಲ್ಲಿ ಗುರು ದಕ್ಷಿಣೆಯಾಗಿ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಕೇಳುವ ಕಥಾನಕವನ್ನು ಸ್ವಾರಸ್ಯಕರವಾಗಿ ವರ್ಣಿಸಲಾಗಿದೆ. ಗುರುವಿಗಾಗಿ ಏನನ್ನು ಬೇಕಾದರೂ ನೀಡಲು ಸಿದ್ಧ ಎಂದು ಎದೆ ತಟ್ಟಿ ಹೇಳುವ ಏಕಲವ್ಯ ಓದುಗರ ಮನದಲ್ಲಿ ಶಾಶ್ವತವಾಗಿ ಮನೆ ಮಾಡಿ ನಿಲ್ಲುತ್ತಾನೆ. ಅತ್ಯಂತ ಭಾವುಕವಾಗಿ ಈ ನಾಟಕದಲ್ಲಿನ ದೃಶ್ಯಗಳು ಮೂಡಿ ಬಂದಿವೆ. ಓದುಗರಲ್ಲಿ ಕುತೂಹಲವನ್ನು ಉಂಟು ಮಾಡುವ ಜೊತೆಗೆ ಏಕಲವ್ಯನ ಗುರುನಿಷ್ಠೆ ಹಾಗೂ ಏಕಾಗ್ರತೆಯ ವರ್ಣನೆ ನೀಡುವ ನಾಟಕವಿದು.
©2024 Book Brahma Private Limited.