ಅಲ್ಲಮನ ಬಯಲಾಟ

Author : ಲಕ್ಷ್ಮೀಪತಿ ಕೋಲಾರ

₹ 80.00




Year of Publication: 2009
Published by: ವಂಶಿ ಪ್ರಕಾಶನ
Address: #4, ಗಾಯತ್ರಿ ಕಾಂಪ್ಲೆಕ್ಸ್, ಟಿ.ಬಿ.ಬಸ್ಟಾಂಡ್ ಹತ್ತಿರ, ಬಿ.ಚ್ ರೋಡ್, ಸುಭಾಷ್ ನಗರ್, ನೆಲಮಂಗಲ, ಬೆಂಗಳೂರು- 562123
Phone: 9916595916

Synopsys

‘ಅಲ್ಲಮನ ಬಯಲಾಟ’ ಕೃತಿಯು ಲಕ್ಷ್ಮೀಪತಿ ಕೋಲಾರ ಅವರ ನಾಟಕ ಕೃತಿಯಾಗಿದೆ. ಈ ನಾಟಕದ ಹಿಂದಿ ಅನುವಾದ ‘ಶೂನ್ಯ ಶಿಕಾರಿ’ಗೆ ಸಂದ ರಾಷ್ಟ್ರಪ್ರಶಸ್ತಿಯೂ ಸೇರಿ ಒಟ್ಟು 6 ಪ್ರಶಸ್ತಿಗಳನ್ನು ಪಡೆದಿದೆ. ಅಲ್ಲಮ್ಮಪ್ರಭು ತನ್ನ ಮಹಾಯಾನದಲ್ಲಿ ಲೋಕದ ಮುಂದಿಟ್ಟ ಜೀವನ ಮೀಮಾಂಸೆ ಮತ್ತು ಕಾವ್ಯಪರಿಕರಗಳಾಗಿರುವ ದುಃಖದ ಅನುಸಂಧಾನ ಭಿನ್ನಾಭಿನ್ನ ನಿರಾಕರಣೆ, ಪ್ರಮಾಣ ನಿರಾಕರಣೆ, ಕಾಲ ನಿರಾಕರಣೆ, ದ್ವೈತಾಷ್ಟ್ರೆತ ನಿರಾಕರಣೆಗಳನ್ನು ದೃಶ್ಯ ಗಳನ್ನಾಗಿಸುವಲ್ಲಿ ಲಕ್ಷ್ಮೀಪತಿ ಆಸ್ಥೆ ವಹಿಸಿದ್ದಾರೆ. ಅಲ್ಲಮ್ಮನ ಸಂಕಥನಕ್ಕೆ ಅವರು ಒದಗಿಸಿಕೊಂಡಿರುವ ಭಿನ್ನ ಮೂಲ ಮಾತೃಕೆಗಳ ಕಾರಣಕ್ಕೆ ಮತ್ತು ಇಲ್ಲಿ ಶೋಧಿಸಲು ಹೊರಟಿರುವ ಕಾವ್ಯ ಮೀಮಾಂಸೆಯ ಕಾರಣಕ್ಕೆ ನಾಡಿನ ಸಾಂಸ್ಕೃತಿಕ ಯಾನದಲ್ಲಿ ಈ ನಾಟಕ ಒಂದು ಪ್ರಮುಖ ಘಟ್ಟವಾಗಿದೆ.

About the Author

ಲಕ್ಷ್ಮೀಪತಿ ಕೋಲಾರ

ಕೋಲಾರ ಮೂಲದ ಲಕ್ಷ್ಮೀಪತಿ ಕೋಲಾರ ಅವರು ಹವ್ಯಾಸಿ ಪತ್ರಕರ್ತರು, ಕವಿ, ವಿಮರ್ಶಕ, ನಾಟಕಕಾರ, ಜಾನಪದ ಸಂಶೋಧಕರು.  ದಕ್ಷಿಣ ದಂಡಾಜೀವಿಕ, ಅಲ್ಲಮನ ಬಯಲಾಟ (ನಾಟಕ) ಇತ್ಯಾದಿ ಕೃತಿಗಳನ್ನು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.  ಪ್ರಶಸ್ತಿ-ಗೌರವಗಳು: ಗಿರೀಶ್ ಕಾಸರವಳ್ಳಿ, ನಾಗಾಭರಣ ನಿರ್ದೇಶಿಸಿದ ರಾಜ್ಯ,ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳಿಗೆ ಅವರು ಸಂಭಾಷಣೆ ಬರೆದಿದ್ದಾರೆ. ಅವರ ’ಬೇರು’ ಮತ್ತು ’ಮುಖಾಮುಖಿ’ ಚಲನಚಿತ್ರಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಎರಡು ಬಾರಿ ಬಹುಮಾನ ಬಂದಿದೆ. ವೀಚಿ ಸಾಹಿತ್ಯ ಪ್ರಶಸ್ತಿ, ಜೋಳದರಾಶಿ ದೊಡ್ಡಣ ಗೌಡ ಪ್ರಶಸ್ತಿ, ಸಂಸ ರಂಗಪುರಸ್ಕಾರ ಪ್ರಶಸ್ತಿಗಳೂ ಸಂದಿವೆ. ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ...

READ MORE

Related Books