ಗಿರೀಶ ಕಾರ್ನಾಡರ ನಾಟಕ. ತರ್ಕದ ಉರುಳಿನಲ್ಲಿ ಯಯಾತಿಯನ್ನು ಕಟ್ಟಿ ಹಾಕುವ ಚಿತ್ರಲೇಖೆಯ ಸ್ವಂತಿಕೆ ಮೆಚ್ಚುಗೆಗೆ ಪಾತ್ರವಾಗದೇ ಇರದು. ಮೊದಲ ಕೃತಿಯಲ್ಲಿಯೇ ಸೊಗಸಾದ ರಂಗಶಿಲ್ಪದ ಆಕೃತಿ ಕಟ್ಟಿಕೊಟ್ಟಿರುವ ಗಿರೀಶ್ ಕಾರ್ನಾಡ್ ಅವರಿಗೆ ಈ ನಾಟಕ ರಚನೆಗೆ ಅಸ್ತಿತ್ವವಾದದ ಪ್ರೇರಣೆ ಆಗಿದೆ. ಪೌರಾಣಿಕ ಕತೆ- ಪಾತ್ರಗಳಿಗೆ ಆಧುನಿಕ-ಸಮಕಾಲೀನತೆಯ ಸ್ಪರ್ಶ ನೀಡಿರುವುದು ಹಾಗೂ ವಿಭಿನ್ನ ಓದಿಗೆ ಅನುವು ಮಾಡಿಕೊಡುವುದು ಈ ಪುಸ್ತಕದ ವಿಶೇಷ.
©2024 Book Brahma Private Limited.