`ಮಂಟೇಸ್ವಾಮಿ ಕಥಾಪ್ರಸಂಗ’ ಕೃತಿಯು ಎಚ್.ಎಸ್. ಶಿವಪ್ರಕಾಶ್ ಅವರ ನಾಟಕ ಸಂಕಲನವಾಗಿದೆ. ಕನ್ನಡ ರಂಗಭೂಮಿ ಇತಿಹಾಸದಲ್ಲಿ ಮೈಲಿಗಲ್ಲು ಪಡೆದ ಕೃತಿ ಇದಾಗಿದೆ. ಬಡವರ, ಕೆಳಸ್ಥರದ ಜನರಲ್ಲಿ ಆತ್ಮವಿಶ್ವಾಸ ತುಂಬುವ ಅವರ ಕಷ್ಟಗಳಲ್ಲಿ ಭಾಗಿಯಾಗುವ ಮಂಟೆಸ್ವಾಮಿಯವರ ಜೀವನವೇ ಒಂದು ಕಾವ್ಯವಾಗಿ, ಹಾಡಾಗಿ ನಮ್ಮಮುಂದೆ ನಿಂತಿದೆ. "ಏಳು ಒಂಟೆಯಮೇಲೆ ವೇದ ಪುರಾಣ ಏರಿಕೊಂಡು ದೇವಮಾನವರ್ನೆಲ್ಲಾ ಸೆರೆ ಇಡ್ಯಕ್ ಕಲಿ ಪುರೂಸ ಬತ್ತಾನೆ. ಅವಾಗ ನೀವು ಅವನ ವೇದ ಪುರಾಣಗಳ ಸುಟ್ಟು ಬೂದಿಮಾಡಿ ಆಣೇಗೆಅಚ್ಕಳ್ರಪ್ಪಾ. ಉಳಿಮುಟ್ಟದ್ಲಿಂಗ ಇಡ್ಕಂಡ್ ಐಕ್ಯವಾಗ್ರಪ್ಪ" ಎನ್ನುವ ಮಂಟೇಸ್ವಾಮಿಯ ಕೊನೆಯ ಮಾತು ಬ್ರಾಹ್ಮಣಶಾಹಿ, ಪುರೋಹಿತಶಾಹಿ ನೀತಿಯ ವಿರುದ್ಧ ಕೆಳಸ್ಥರದ ಜನರಿಗೆ ಮಂಟೇಸ್ವಾಮಿಯ ಆತ್ಮವಿಶ್ವಾಸವನ್ನು ತುಂಬುವ ಸರಿದಾರಿಯೆಡೆಗೆ ಕೊಂಡೊಯ್ಯುವ ಮಾತುಗಳಾಗಿವೆ. ಒಬ್ಬ ವ್ಯಕ್ತಿಕೇಂದ್ರಿತ ನಾಟಕವಾದರೂ ಸಹ ಆ ವ್ಯಕ್ತಿ ಇಡೀ ಸಮಾಜವನ್ನು ಬಿಂಬಿಸುವ ಸಮಾಜಮುಖಿಯಾಗಿರುವುದರಿಂದ ಈ ನಾಟಕದಿಂದ ಕಲಿಯುವುದು ತುಂಬಾನೇ ಇದೆ. ಮತ್ತು ಇಂತಹ ಇತಿಹಾಸವನ್ನು ನಮ್ಮ ಮುಂದೆ ಇಡುವಂತಹ ಅಪರೂಪದ ನಾಟಕಗಳನ್ನು ನಾವು ಓದಲೇಬೇಕು.
©2024 Book Brahma Private Limited.